ವಿಟ್ಲ: ಶಿಲ್ಪಶ್ರೀ ಯುವಕ ಮಂಡಲ (ರಿ.) ಕೊಡಂಗಾಯಿ ಇದರ ಕಛೇರಿಯಲ್ಲಿ 75 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವವನ್ನು ಸರಳವಾಗಿ ಆಚರಿಸಲಾಯಿತು. ಶಿಲ್ಪಶ್ರೀ ಯವಕ ಮಂಡಲದ ಗೌರವಾಧ್ಯಕ್ಷರಾದ ನಾರಾಯಣ ಭಟ್ ಪಂಜಿಗದ್ದೆ ಮತ್ತು ಅಧ್ಯಕ್ಷರಾದ ಪ್ರಸನ್ನ ಕುಮಾರ್ ರೈ ಮಾರುಗುಳಿ ಧ್ವಜಾರೋಹಣ ನೇರವೆರಿಸಿದರು.

ಈ ಸಂದರ್ಭದಲ್ಲಿ ವಿಟ್ಲ-ಪಡ್ನೂರು ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ನಾಗೇಶ್ ಶೆಟ್ಟಿ ಕೊಡಂಗಾಯಿ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಸುಜಯ, ವಿಟ್ಲ-ಪಡ್ನೂರು ಗ್ರಾಮ ಪಂಚಾಯತಿ ಸದಸ್ಯರು, ಸಿಬ್ಬಂದಿ ವರ್ಗ, ಶಿಲ್ಲಶ್ರೀ ಯುವಕ ಮಂಡಲದ ಪದಾಧಿಕಾರಿಗಳಾದ ಅರವಿಂದ ರೈ ಮೂರ್ಜೆಬೆಟ್ಟು, ಸಂದೇಶ್ ಶೆಟ್ಟಿ ಬಿಕ್ನಾಜೆ, ಜಯರಾಮ ಮಾರುಗುಳಿ, ಪ್ರಮೋದ್ ರೈ ಮಾರುಗುಳಿ, ರೋಹಿತ್ ರೈ ಚೆಂಬರಡ್ಕ ಹಾಗೂ ಊರಿನ ಗಣ್ಯರು ಉಪಸ್ಥಿತರಿದ್ದರು. ವಲ್ಲಭ ತಂತ್ರಿ ಕೊಡಂಗಾಯಿ ವಂದಿಸಿದರು.

