ಸುಳ್ಯ:ದೇಶದೆಲ್ಲೆಡೆ ಆಗಸ್ಟ್ 15ರಂದು 75ನೇ ಸ್ವಾತಂತ್ರ್ಯೋವವನ್ನು ಆಚರಿಸಲಾಯಿತು. ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರ ಏರಣಗುಡ್ಡೆಯಲ್ಲಿ ದೈನಂದಿನ ಕೆಲಸಕ್ಕೆ ಹೊರಟಿದ್ದ ಮಹಿಳೆಯೋರ್ವರು ಚಪ್ಪಲಿ ಕಳಚಿಟ್ಟು ಧ್ವಜಕ್ಕೆ ಸೆಲ್ಯೂಟ್ ಮಾಡಿದ ಫೋಟೋ ವೈರಲ್ ಆಗಿದೆ.

ಸುಳ್ಯದ ಗಾಂಧಿ ವಿಚಾರ ವೇದಿಕೆ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಕಾರ್ಯಕ್ರಮ ಮುಗಿದ ಮೇಲೆ ಅದೇ ದಾರಿಯಾಗಿ ಕೂಲಿಗೆ ಹೊರಟಿದ್ದ ಮಹಿಳೆ ಧ್ವಜವನ್ನು ಕಂಡು, ರಾಷ್ಟ್ರ ಧ್ವಜಕ್ಕೆ ಗೌರವ ಸಲ್ಲಿಸಿದ್ದಾರೆ. ಚಪ್ಪಲಿ ಕಳಚಿಟ್ಟು, ಧ್ವಜಕ್ಕೆ ಸೆಲ್ಯೂಟ್ ಮಾಡಿದ್ದಾರೆ. ಸ್ಥಳದಲ್ಲಿ ಇದ್ದವರು ಈ ಕ್ಷಣವನ್ನು ಸೆರೆ ಹಿಡಿದಿದ್ದಾರೆ. ಈಗ ಈ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಹಳಷ್ಟು ಜನರು ಸಾಮಾನ್ಯ ಮಹಿಳೆಯೊಬ್ಬರ ದೇಶಪ್ರೇಮದ ಫೋಟೊವನ್ನು ಮೆಚ್ಚಿ, ಹಂಚಿಕೊಂಡಿದ್ದಾರೆ.