ಕಲ್ಲಡ್ಕ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇದರ ಸ್ವಸಹಾಯ ಸಂಘಗಳ ಒಕ್ಕೂಟ ಬಾಳ್ತಿಲ ಇದರ ಆಶ್ರಯದಲ್ಲಿ ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮದ ಅಂಗವಾಗಿ ಶ್ರೀ ಮಣಿಕಂಠ ಭಜನಾ ಮಂದಿರ ಕುದ್ರೆಬೆಟ್ಟು ಇದರ ಸುತ್ತಮುತ್ತಲಿನ ಪರಿಸರದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.
ಬಾಳ್ತಿಲ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಸುಂದರ ಸಾಲಿಯಾನ್ ದೀಪ ಬೆಳಗಿಸಿ ಸ್ವಚ್ಛತಾ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಕಲ್ಲಡ್ಕ ವಲಯದ ಮೇಲ್ವಿಚಾರಕರಾದ ಶ್ರೀಮತಿ ಸವಿತಾ,ಬಾಳ್ತಿಲ ಒಕ್ಕೂಟದ ಸೇವಾ ಪ್ರತಿನಿಧಿ ಶ್ರೀಮತಿ ವಿದ್ಯಾ ಬೊಂಡಾಲ ಒಕ್ಕೂಟದ ಕೋಶಾಧಿಕಾರಿ ಶ್ರೀಮತಿ ಉಷಾ ಸುರೇಶ್ ನಿಕಟ ಪೂರ್ವ ಸೇವಾ ಪ್ರತಿನಿಧಿ ಸುಜಾತ ಎಂ ಜನಶಕ್ತಿಸೇವಾ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಸೀತಾರಾಮ ಧರ್ಮದ ಬಳ್ಳಿ ,ಟ್ರಸ್ಟಿಗಳಾದ ರವಿ ಸುವರ್ಣ ಬೈಲು , ಮಣಿಕಂಠ ಯುವಶಕ್ತಿ ಅಧ್ಯಕ್ಷರಾದ ಮಾಧವ ಸಾಲಿಯಾನ್ , ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ನಿಕಟಪೂರ್ವ ಅಧ್ಯಕ್ಷರಾದ ಸನತ್ ಕುಮಾರ್, ನಿತಿನ್ ಕುಮಾರ್ ,ರಮೇಶ್ ಕುದುರೆ ಬೆಟ್ಟು,ಗ್ರಾಮ ಪಂಚಾಯತ್ ಸದಸ್ಯರಾದ ಲತೇಶ್ ಕುರ್ಮನ್ , ಸುಂದರ ಪಾದೆ ,ವಾಸುದೇವ ,ಶಿವರಾಜ್,ಸಂತೋಷ್ ಕುಮಾರ್ ಭೂಲ್ಪೋಡಿ ಹಾಗೂ ಕುದ್ರಬೆಟ್ಟು ಆಸುಪಾಸಿನ ಸ್ವಸಹಾಯ ಸಂಘಗಳ ಸದಸ್ಯರು ಭಾಗವಹಿಸಿದ್ದರು.