ಪುತ್ತೂರು: ಕಬಕ ಗ್ರಾ.ಪಂ ವ್ಯಾಪ್ತಿಯಲ್ಲಿ ನಡೆದ ಗ್ರಾಮ ಸ್ವರಾಜ್ಯ ರಥಕ್ಕೆ ಅಡ್ಡಿ ಪಡಿಸಿದ ಆರೋಪಕ್ಕೆ ಸಂಬಂಧಿಸಿ ಬಂಧಿತರಾಗಿದ್ದ ಮೂವರು ಎಸ್.ಡಿ.ಪಿ.ಐ ಕಾರ್ಯಕರ್ತರು ಇಂದು ಜೈಲಿನಿಂದ ಬಿಡುಗಡೆಗೊಂಡಿದ್ದಾರೆ.
ಎಸ್.ಡಿ.ಪಿ.ಐ ಮುಖಂಡರು ಅವರನ್ನು ಹಾರ ಹಾಕಿ ಸ್ವಾಗತ ಮಾಡಿದರು. ಎಸ್ಡಿಪಿಐ ಜಿಲ್ಲಾ ನಿಯೋಗ. ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ, ಕಾರ್ಯದರ್ಶೀಗಳಾದ ಅನ್ವರ್ ಸಾದಾತ್,ಜಮಾಲ್ ಜೋಕಟ್ಟೆ, ಶರೀಫ್ ಪಾಂಡೇಶ್ವರ, ಮುಝೈರ್ ಕುದ್ರೋಳಿ, ಅಮೀನ್ ಬಂದರ್,ಲತೀಫ್ ಸಾಲ್ಮರ,ರಝಾಕ್ ಮಿತ್ತೂರ್ ಅವರನ್ನು ಸ್ವಾಗತಿಸಲು ಮಂಗಳೂರಿಗೆ ತೆರಳಿದ್ದರು.
ಅಜೀಜ್,ಶಮೀರ್,ಅಬ್ದುಲ್ ರಹಿಮಾನ್ ವಿರುದ್ಧ ಕಬಕ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನೀಡಿರುವ ದೂರಿನ ಮೇರೆಗೆ ಪುತ್ತೂರು ನಗರ ಠಾಣೆಯಲ್ಲಿ ಅ. ಕ್ರ: 61/2021 ಕಲಂ: 143,147,269,353,323,427 ಜೊತೆಗೆ 149 ಐ.ಪಿ.ಸಿ ಮತ್ತು 2(A) KPDLP ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಆ.17 ರಂದು ಮೂರು ಜನರಿಗೂ ಪುತ್ತೂರು ನ್ಯಾಯಲಯ ಜಾಮೀನು ಮುಂಜೂರು ಮಾಡಿತ್ತು.