ಮಂಗಳೂರಿನ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ತರಬೇತಿ ಕೇಂದ್ರದಲ್ಲಿ ಪ್ರಾಂಶುಪಾಲೆಯಾಗಿದ್ದ ಶ್ರೀಮತಿ ರೇನಾ ಶಿವಪ್ಪರವರು ಜು.31 ರಂದು ನಿವೃತ್ತಿಯಾಗಿದ್ದಾರೆ.
ಮೂಲತಃ ಜಾಲ್ಲೂರು ಗ್ರಾಮದ ಕುಕ್ಕಂದೂರು ಹುಲಿಮನೆ ಸೋಮಪ್ಪ ಗೌಡ ಹಾಗೂ ದಿ.ಶ್ರೀಮತಿ ಕಮಲರವರ ಪುತ್ರಿಯಾಗಿರುವ ಶ್ರೀಮತಿ ರೇನಾರವರು 1982ರಲ್ಲಿ ಕೊಲ್ಲಮೊಗ್ರ ಪ್ರಾಥಮಿಕ ಆರೋಗ್ಯ ಉಪಕೇಂದ್ರದಲ್ಲಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯಾಗಿ ಸೇವೆ ಸಲ್ಲಿಸಲು ಆರಂಭಿಸಿದರು. ನಂತರ ಮಂಗಳೂರಿನ ಬೊಂದೇಲ್ ಪ್ರಾ. ಆರೋಗ್ಯ ಕೇಂದ್ರದಲ್ಲಿ ಸೇವೆ ಸಲ್ಲಿಸಿದ್ದರು.

2016ರಲ್ಲಿ ಜಿಲ್ಲಾ ವೆಸ್ಲಾಕ್ ಆಸ್ಪತ್ರೆಯಲ್ಲಿ ಬೋಧಕಿಯಾಗಿ, ಪ್ರಾಂಶುಪಾಲೆಯಾಗಿ ಕರ್ತವ್ಯದಲ್ಲಿದ್ದರು. ಪ್ರಸ್ತುತ ಕುಟುಂಬ ಸಮೇತ ಮಂಗಳೂರಿನಲ್ಲಿ ನೆಲೆಸಿರುವ ಇವರು, ಪತಿ ಶಿವಪ್ಪ ಮಂಡೆಕೋಲಿನ ದೇವರಗುಂಡದವರು. ಕುದುರೆಮುಖ ಐರನ್ ಕಂಪೆನಿಯ ನಿವೃತ್ತ ಅಧಿಕಾರಿ. ಪುತ್ರಿಯರಾದ ರಂಜಿತಾ ಪ್ರವೀಣ್ ವಿವಾಹವಾಗಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಇನ್ನೋರ್ವ ಪುತ್ರಿ ರಜತಾ ಪ್ರಸಾದ್ ಕೋನಡ್ಕ ವಿವಾಹವಾಗಿ ಮಂಗಳೂರಿನಲ್ಲಿ
ನೆಲೆಸಿದ್ದಾರೆ.