ಸಂಗೀತದ ಸಪ್ತ ಸ್ವರಗಳನ್ನು ತನ್ನ ಕಂಠ ಸಿರಿಯಲ್ಲಿ ತುಂಬಿಸಿಕೊಂಡು ನವ ನವೀನ ಭಕ್ತಿ ಗೀತೆ, ಭಾವ ಗೀತೆ, ಪ್ರೇಮ ಗೀತೆ ಗಳಿಗೆ ಜೀವ ತುಂಬುವ, ಗಾಯನ ಲೋಕದಲ್ಲಿ ತನ್ನದೆ ಆದ ಛಾಪನ್ನು ಮೂಡಿಸಿದಂತ ಕಲಾ ಪ್ರತಿಭೆ ‘ರಾಜೇಶ್ ಮುಡಿಪು’.. ಬಂಟ್ವಾಳ ತಾಲೂಕಿನ ಬಾಳೆಪುಣಿ ಗ್ರಾಮದ ಮುಡಿಪು ಎಂಬಲ್ಲಿ ಗೋಪಾಲ ಪೂಜಾರಿ ಮತ್ತು ಸುಮತಿ ದಂಪತಿಗಳ ಮಗನಾದ ರಾಜೇಶ್ ತನ್ನ ಪ್ರಾಥಮಿಕ ಹಾಗು ಪ್ರೌಢ ಶಿಕ್ಷಣವನ್ನು ಸರ್ಕಾರಿ ಹೈಸ್ಕೂಲ್ ಮುಡಿಪು, ಪದವಿ ಶಿಕ್ಷಣವನ್ನು ಸರ್ಕಾರಿ ಕಾಲೇಜಿನಲ್ಲಿ ಪೂರ್ಣಗೊಳಿಸಿದರು.
ಬಾಲ್ಯ ಕಾಲದಿಂದಲೂ ಸಂಗೀತ ಕುರಿತು ಆಸಕ್ತಿ ಇದ್ದು ಗಾಯನ ಹಾಗು ನಟನೆಯನ್ನು ಶಾಲಾ ಜೀವನದಿಂದಲೇ ಆರಂಭಿಸಿದರು. ಇವರ ಈ ಪ್ರತಿಭೆಗೆ ನೀರೆರೆದು ಪೋಷಿಸಿದರು ಶಾಲಾ ಶಿಕ್ಷಕರು, ಕುಟುಂಬದ ಸದಸ್ಯರು ಹಾಗೂ ಆಪ್ತ ಗೆಳೆಯರು. ಇವರೆಲ್ಲರ ಪ್ರೀತಿ ವಿಶ್ವಾಸದಿಂದಲೇ ರಾಜೇಶ್ ಮುಡಿಪು ಎನ್ನುವ ನೂತನ ಪ್ರತಿಭೆ ಗಾಯನ ಲೋಕದಲ್ಲಿ ಮೂಡಿ ಬರಲು ಕಾರಣವಾಯಿತು.
ಬದ್ಕ್ ಪನ್ಪಿನ ಇಂಚನೇ ಎಂಬ ಕಿರು ಚಿತ್ರದ ಹಾಡಿಗೆ ಮೊದಲ ಧ್ವನಿ ನೀಡಿ ಆರಂಭಿಸಿದ ಮೊದಲ ಹೆಜ್ಜೆ ಇದೀಗ 85ಕ್ಕೂ ಹೆಚ್ಚು ಹಾಡಿಗೆ ದನಿಯಾಗುವ ಮೂಲಕ ವಿಸ್ತರಿಸಿದೆ, ಇನ್ನೂ ವಿಸ್ತರಿಸುತ್ತಾ ಇದೆ. ಪ್ರಭಾಕರ್ ಸುವರ್ಣ ರಾಯ್ ಇವರ ನಿರ್ದೇಶನದ ಮೋಕೆದ ಕನ, ಫೇಕ್ ಡ್ರೀಮ್ ಪ್ರೀತಿ ಎಂಬ ಆಲ್ಬಂನಲ್ಲಿ ಧ್ವನಿ ಜೊತೆಗೆ ಅಭಿನಯ ಸಾಮರ್ಥ್ಯವನ್ನು ಕಲಾ ಜಗತ್ತಿಗೆ ತೋರಿಸಿದರೆ, ಇವರ ಬಹಳಷ್ಟು ವಿಡಿಯೋ ಆಲ್ಬಮ್ ಗೀತೆಗಳು ಇಂತಿವೆ. ಅತಿಥ್ ಸುವರ್ಣ ಪಾಲಮೆ ಸಾಹಿತ್ಯದ ಶಿರ್ವದ ಜಾರಂದಾಯ, ಅಮರ್ನಾಥ್ ಕುಲಾಲ್ ಬರೆದ ಗಿಂಡೆಪೇರ್ ಸುಮಾರು 2.50ಲಕ್ಷ ಜನರನ್ನು ತಲುಪಿದೆ, ಇತೀಚೆಗೆ ಬಿಡುಗಡೆ ಗೊಂಡ ಕುಸುಮ್ಯ ಕಾರ್ಕಳ ಸಾಹಿತ್ಯ ದ ಮಯೋದ ಮುಗೆರ್ಲು, ತುಳುನಾಡ ಮಯ್ಕಾರೆ ಲಕ್ಷ ಜನರನ್ನು ಸೆಳೆಯುತ್ತ ಮುನ್ನಡೆದಿದೆ. ತುಳುನಾಡ ಸತ್ಯಗಳಾದ ಸ್ವಾಮಿ ಕೊರಗಜ್ಜ, ಜುಮಾದಿ, ಬಬ್ಬು ಸ್ವಾಮಿ ಮಂತ್ರದೇವತೆ ಹಲವಾರು ಭಕ್ತಿಗೀತೆಗಳಿಗೆ ಧ್ವನಿ ನೀಡಿ ಮನೆಮಾತಾಗಿದ್ದಾರೆ.
ಮೋನಿಶ್ ಕುಮಾರ್ ಬರೆದ ನಿನ್ನನೇ ಸಾದಿ, ಕಟ್ಟಿಕನ, ಸರಿಗಮಪ ವಿನಯ ಗಟ್ಟಿ ಸಾಹಿತ್ಯದ ಮನಸುದ ಉಲಯಿ, ಕದ್ದು ನೋಡಿದೆ ನಿನ್ನ ಕಣ್ಣು, ಶಿವಕುಮಾರ್ ಬರೆದ ಮನಸ್ದ ಆಸೆ, ಸಂತು ಶಿವಮೊಗ್ಗ ಬರೆದ ಪಾತಕಿ, ಯೋಗೀಶ್ ಇವರು ಬರೆದಿರುವ ಅಮೃತ ಯೆನ್ನ ಪಾಲ್ಗ್, ಸೌಮ್ಯ ಶೆಟ್ಟಿ ಬರೆದಿರುವ ಓ ಎನ್ನ ಬಾಲೆ, ಅಲೆನ ಪಜ್ಜೆ, ಅಶ್ವಿನಿ ಬರೆದಿರುವ ಕಡಲ್ದ ಉಡಲ್, ಜಯಲಕ್ಷ್ಮಿ ಇವರು ಬರೆದ ಅಲೆಗಾದ್ ಇವೆಲ್ಲವೂ ರಾಜೇಶ್ ಮುಡಿಪು ಇವರ ಸ್ವರ ಮಾದುರ್ಯ ವನ್ನು ವಿಜೃಂಬಿಸಿದ ಗೀತೆಗಳು. ಇದಲ್ಲದೆ ರಾಜೆ ಯೆನ್ನ ಮಹಾರಾಜೆ, ಅಲ್ ಎನ್ನಾಲ್, ಮೋಕೆದ ಪನಿಬರ್ಸ, ಕಿಸೆಖಾಲಿ ಇವೆಲ್ಲವೂ ಯಶಸ್ವಿಯಾಗಿರುವ ಕಾವ್ಯ ಕುಸುಮ ಗಳು ರಾಜೇಶ್ ಇವರ ಧ್ವನಿಯಲ್ಲಿ ಮೂಡಿ ಬಂದಿದೆ.
ತುಳುನಾಡ ಸತ್ಯಗಳ ಕುರಿತಂತೆ ಪಟ್ಟೋರಿದ ಮಣ್ಣ್, ಶ್ರೀ ನಾಗಬ್ರಹ್ಮ, ಧರ್ಮರಸು, ನೀರ್ ದೀಪಿ ಕಟ್ಟೆ, ಗಿಂಡೆ ಪೇರ್, ಶಿರ್ವದ ಜಾರಂದಾಯ, ಶಿರ್ವದ ಮಾಣಿಕ್ಯ, ಕಣಿಯೂರುದೈಸಿರಿ, ಸೊರ್ಪುದ ಸತ್ಯೋದ ಮಾಯೆ, ಮಂಕುಡೆದ ಪುಣ್ಯ ಮಣ್ಣ್, ಶರಣು ಶಿರ್ವದ ಒಡೆಯ, ಸ್ವರ್ಣ ತಿರಿ, ಕಾರ್ಣಿಕದ ಮಲರಾಯ, ಸಿರಿ ಪುರ್ಪ, ಮಾಯಾ ದಿಟ್ಟಿ, ಅಪ್ಪೆ ಮಂತ್ರ ದೇವತೆ, ಕರುಣಾಳು ಮಾತೆ, ಜ್ಞಾನ ದೀಪ, ಶಿರ್ವದ ಕಾರ್ಣಿಕದ ಬಬ್ಬು ಸ್ವಾಮಿ, ಸೊರ್ಪುದ ಅಪ್ಪೆ, ಮಂತ್ರಾದೇವತೆ, ಸ್ವಾಮಿ ಬೈದೆರ್ಲೆ, ಕಡೆಶಿವಾಲಯದ ಬೊಲ್ಪು,ಮಾಯೊದ ಮುಗೆರ್ಲು, ಕುಂಡಡ್ಕ ದ ಮಣ್ಣ್, ಕರಿವರ್ಣದ ಮಾಯೆ, ಗಿರಿತಉಲ್ಲಾಯ,ಸತ್ಯೋದ ಸಿರಿ ಕಲ್ಲುರ್ಟಿ, ಬೊಲ್ಪುದರತಿ ಅಪ್ಪೆ ದುರ್ಗೆಗ್, ಧರ್ಮ ದೈವ ಜುಮಾದಿ, ಇಂಬುದ ಬುಲ್ಯಾ, ದೈವರಾಜೆ ಬಬ್ಬುಸ್ವಾಮಿ,ಮಂತ್ರ ಜಾವದೆ, ದಂಟೆ ಮುಟ್ಟಾಲೆ, ತುಳುನಾಡ ಮಯ್ಕಾರೆ ಬಬ್ಬು ಮೊದಲಾದ ಭಕ್ತಿಗೀತೆಗಳು ಇವರ ಪ್ರತಿಭೆಗೆ ಸಾಕ್ಷಿಯಾಗಿದೆ. ಇದೀಗ ಶಿರ್ವ ಕ್ರಿಯೇಷನ್ ನ ಭಾಗವಾಗಿದ್ದು ತುಳುನಾಡಿನ ಪ್ರತಿಭನ್ವಿತಾ ಸಾಹಿತಿಗಳ ಸಾಹಿತ್ಯವನ್ನು ಕಲಾ ಜಗತ್ತಿಗೆ ಪರಿಚಯಿಸುತ್ತಿರುವ ರಾಜೇಶ್ ಮುಡಿಪು ಇವರ ಸ್ವರ ಮಾದುರ್ಯ ಸಮಸ್ತ ಲೋಕವನ್ನು ತಲುಪಲಿ ಎಂಬ ಶುಭ ಹಾರೈಕೆಗಳು..
ಬರಹ : ಕುಸುಮ್ಯ ಕಾರ್ಕಳ