ಪುತ್ತೂರು: ಪುತ್ತೂರು ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗಗಳ ಘಟಕದ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ರವರ 167ನೇ ಜನ್ಮದಿನಾಚರಣೆಯನ್ನು ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಆಚರಿಸಲಾಯಿತು. ದ.ಕ.ಜಿಲ್ಲಾ ಕಾಂಗ್ರೆಸ ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್ ಮಾತನಾಡಿ ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂದು ಸಾರಿದ ಬ್ರಹ್ಮಶ್ರೀ ನಾರಾಯಣ ಗುರುರವರು ಸಮಾನತೆಯ ಜ್ಯೋತಿ ಬೆಳಗಿದವರಾಗಿದ್ದಾರೆ ಎಂದು ಹೇಳಿದರು.
ಸಮಾಜದಲ್ಲಿ ಮೇಲು ಕೀಳು ಜಾತಿ ಬಡವ ಬಲ್ಲಿದನೆಂಬ ತಾರತಮ್ಯನ್ನು ತೊಡೆದು ಹಾಕಿ ಶೋಷಿತರಿಗೆ ಆತ್ಮಸ್ಥೈರ್ಯದ ಬದುಕು ನೀಡಿದ ಮಹಾ ಪುರುಷರಾಗಿದ್ದಾರೆ. ಇಂತಹ ಪುಣ್ಯ ಪುರುಷರ ಹಾದಿಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬರು ಮೂಲಕ ಸುಂದರ ಸಮಾಜ ನಿರ್ಮಿಸುವಲ್ಲಿ ತಾವೆಲ್ಲರೂ ಆತ್ಮಸ್ಥೈರ್ಯದ ಮೂಲಕ ಮುಂದೆ ಬರಬೇಕು ಎಂದು ಹೇಳಿದರು. ಪುತ್ತೂರು ಬ್ಲಾಕ್ ಕಾಂಗ್ರಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ ಅಧ್ಯಕ್ಷತೆ ವಹಿಸಿದ್ದರು.

ಪುತ್ತೂರು ಇಂಟಕ್ ಅಧ್ಯಕ್ಷ ಜಯಪ್ರಕಾಶ್ ಬದಿನಾರ್ ರವರು ಮಾತನಾಡಿ ಬ್ರಹ್ಮಶ್ರೀ ನಾರಾಯಣಗುರುಗಳು ಶೋಷಿತರ ವರ್ಗವನ್ನು ಮೇಲಕ್ಕೆತ್ತುವ ಮೂಲಕ ಅವರಿಗೆ ಶಿಕ್ಷಣದ ಮಹತ್ವವನ್ನು ಬೋಧಿಸಿ ಸಮಾಜದ ಎಲ್ಲಾ ವರ್ಗಕ್ಕೂ ಸಮಾನತೆಯ ಬೆಳಕನ್ನು ತೋರಿದ ಮಹಾಪುರುಷರಾಗಿದ್ದಾರೆ ಎಂದರು. ಪುತ್ತೂರು ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಹರೀಶ್ ಕೋಟ್ಯಾನ್ ನಿಡ್ಪಳ್ಳಿ ರವರು ವಂದಿಸಿ ಮಾತನಾಡಿ ಬ್ರಹ್ಮಶ್ರೀ ನಾರಾಯಣ ಗುರುಗಳು ಜಾತ್ಯಾತೀತ ಧರ್ಮದ ಪರಿಪಾಲಕರಾಗಿದ್ದರು ಅವರು ತೋರಿದ ಪ್ರತಿಯೊಂದು ಹೆಜ್ಜೆ ನಮಗಿಂದು ದಾರಿದೀಪವಾಗಲಿ ಎಂದರು. ಜಿಲ್ಲಾ ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ಜೋಕಿಂ ಡಿಸೋಜ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಯಾಕೂಬ್ ಹಾಜಿ ದರ್ಬೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಮಹಾಬಲ ರೈ ಒಳತ್ತಡ್ಕ ಸ್ವಾಗತಿಸಿದರು.
ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ವಿಎಚ್‌ಎ ಶಕೂರ್ ಹಾಜಿ, ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾರದಾ ಅರಸ್, ಮಾಜಿ ಅಧ್ಯಕ್ಷೆ ವಿಶಾಲಾಕ್ಷಿ ಬನ್ನೂರು, ಜಿಲ್ಲಾ ಕಾಂಗ್ರೆಸ್ ಸದಸ್ಯೆ ನ್ಯಾಯವಾದಿ ಸಾಹಿದಾ ಝುಬೈರ್, ಕಾರ್ಮಿಕ ಘಟಕದ ಅಧ್ಯಕ್ಷ ಶರೂನ್ ಸಿಕ್ವೇರಾ, ಶಿವರಾಮ ಆಳ್ವ ಕುರಿಯ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಯಾಖೂಬ್ ಮುಲಾರ್, ದಿನೇಶ್ ಪಿ.ವಿ., ಅಶೋಕ್ ಕುಮಾರ್ ಕುಂಬ್ರ, ವಿಕ್ಟರ್ ಪಾಸ್, ಗ್ರಾ.ಪಂ. ಮಾಜಿ ಸದಸ್ಯ ಪೂಜಾ ವಸಂತ್, ಕೃಷ್ಣಪ್ಪ ಮೂಲ್ಯ ಬಡಗನ್ನೂರು, ಇಕ್ಬಾಲ್ ಹುಸೈನ್, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಮೌರೀಸ್ ಮಸ್ಕರೇನಸ್, ಎಸ್‌ಸಿ ಘಟಕದ ಅಧ್ಯಕ್ಷ ಕೇಶವ ಪಡೀಲ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.