ಪುತ್ತೂರು: ಗೇರುಕಟ್ಟೆ ಪರಪ್ಪು ನಿವಾಸಿ ಉಸ್ಮಾನ್ ಹಾಗೂ ಆತನ 3ನೇ ಪತ್ನಿ ನನ್ನ ಮೇಲೆ ಹಲ್ಲೆ ನಡೆಸಿರುವುದಾಗಿ ಉಸ್ಮಾನ್ ರವರ 2ನೇ ಪತ್ನಿ ಬಪ್ಪಳಿಗೆ ನಿವಾಸಿ ಮೈಮುನಾ ಎಂಬವರು ನೀಡಿರುವ ದೂರಿನಂತೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಸ್ಮಾನ್ ಎಂಬಾತನು 10 ವರ್ಷಗಳ ಹಿಂದೆ ಮದುವೆಯಾಗಿದ್ದು, ಮೈಮುನಾ ಉಸ್ಮಾನ್ ನ ಎರಡನೇ ಪತ್ನಿಯಾಗಿದ್ದಾಳೆ. ಮದುವೆಯಾದ 5 ವರ್ಷಗಳ ಬಳಿಕ ಉಸ್ಮಾನ್ ಮೈಮುನಾ ಒಪ್ಪಿಗೆ ಇಲ್ಲದೇ ಸಬಿನಾ ಎಂಬ ಯುವತಿಯನ್ನು 3ನೇ ಮದುವೆಯಾಗಿದ್ದಾನೆ. ಮೈಮುನಾ ಆ.22 ರಂದು ತನ್ನ ಗಂಡನ ಮನೆಗೆ ಬಂದಾಗ ಪತಿ ಉಸ್ಮಾನ್ ಮತ್ತು ಆತನ ಮೂರನೇ ಪತ್ನಿ ಸಬಿನಾ ಅವಾಚ್ಯ ಶಬ್ಧಗಳಿಂದ ಬೈದು,ಹಲ್ಲೆ ನಡೆಸಿ, ಆಕೆಯ ಮೈ ಮೇಲೆ ಸೀಮೆಎಣ್ಣೆಯನ್ನು ಎರಚಿದ್ದಾರೆ.
ಈ ಬಗ್ಗೆ ಮೈಮುನಾ ಠಾಣೆಯಲ್ಲಿ ದೂರು ನೀಡಿದ್ದು, ಆರೋಪಿಗಳ ವಿರುದ್ಧ ಅ. ಕ್ರ.30/2021 ಕಲಂ: 498(ಎ), 324,323,504,506,34 ಐಪಿಸಿ ಸೆಕ್ಷನಡಿಯಲ್ಲಿ ಪ್ರಕರಣ ದಾಖಲಾಗಿದೆ.



























