ಇನ್ನುಮುಂದೆ ವಾಟ್ಸಾಪ್‌ನಿಂದಲೇ ಲಸಿಕೆ ಬುಕ್ ಮಾಡಿಕೊಳ್ಳಬಹುದು..ಹೌದು, ಮೈ ಗೌವ್ (My Gov help desk) ಕೊರೋನಾ ಸಹಾಯವಾಣಿಯ ವಾಟ್ಸಾಪ್ ಗುಂಪಿನ ಸಹಾಯದಿಂದ ಇನ್ನು ಮುಂದೆ ಬಳಕೆದಾರರು ತಮ್ಮ ಹತ್ತಿರದ ಲಸಿಕೆ ಕೇಂದ್ರದ ಮಾಹಿತಿ ಪಡೆಯಬಹುದು.
ಜೊತೆಗೆ ಹತ್ತಿರದ ಕೇಂದ್ರದಲ್ಲಿ ಲಸಿಕೆ ಕೂಡ ಬುಕ್ ಮಾಡಬಹುದು. ನಾಗರಿಕರು ಕೊರೋನಾ ಸಂಬಂಧಿ ಮಾಹಿತಿಗಾಗಿ ಕೊರೋನಾ ಸಹಾಯವಾಣಿ ಸಂಪರ್ಕಕ್ಕೆ ಬರಬಹುದು. +91 9013151515 ಈ ವಾಟ್ಸಾಪ್ ನಂಬರ್ ಸೇವ್ ಮಾಡಿಕೊಳ್ಳಿ. ನಂತರ ಈ ಸಂಖ್ಯೆಗೆ Book slot ಎಂಬ ಸಂದೇಶ ಕಳಿಸಿ. ಆಗ ಮೊಬೈಲ್‌ಗೆ ಒಟಿಪಿ ಬರುತ್ತದೆ. ಅದನ್ನು ನಮೂದಿಸಿದರೆ ಬೇಕಾದ ದಿನಾಂಕ ಮತ್ತು ಸ್ಥಳದಲ್ಲಿ ಲಸಿಕೆ ಸಿಗುತ್ತದೆ.




























