ಮಾಣಿ: ಬಂಟ್ವಾಳ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಮಾಣಿ ಗ್ರಾಮದ ನಾಗರಿಕರ ಆರೋಗ್ಯ ತಪಾಸಣೆಯನ್ನು ಬಂಟ್ವಾಳದ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರ ಪ್ರದೇಶಾಭಿವೃದ್ಧಿ ನಿಧಿಯಿಂದ ಅಭಿವೃದ್ಧಿಪಡಿಸಿದ ಕ.ರಾ.ರ.ಸಾ.ಸಂ ಸಂಚಾರಿ ಸುರಕ್ಷಾ ಐ.ಸಿ.ಯು ಆಂಬ್ಯುಲೆನ್ಸ್ ಮೂಲಕ ದ.ಕ.ಜಿ.ಪಂ.ಹಿ ಪ್ರಾಥಮಿಕ ಶಾಲೆ ಮಾಣಿ ಇದರ ವಠಾರದಲ್ಲಿ ಆ.೨೪ ರಂದು ಬೆಳಗ್ಗೆ 10 ಗಂಟೆಯಿಂದ 2 ಗಂಟೆಯವರೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಯಿತು.

ದೇಶದಲ್ಲಿ ಪ್ರಪ್ರಥಮವಾಗಿ ಅನುಷ್ಠಾನಗೊಂಡ ಈ ಯೋಜನೆಯ ಪ್ರಯೋಜನವನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಾಣಿ ಗ್ರಾಮದ ನಾಗರಿಕರು ಪಡೆದುಕೊಂಡರು.12 ಮಕ್ಕಳು 45 (ಮಹಿಳೆಯರು ಮತ್ತು ಪುರುಷರು) 6 ಜನರ ಇ.ಸಿ.ಜಿ ಪರೀಕ್ಷೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾಣಿ ಗ್ರಾಮ ಪಂಚಾಯತ್ ಸದಸ್ಯರಾದ ನಾರಾಯಣ ಶೆಟ್ಟಿ ತೋಟ, ನೇರಳಕಟ್ಟೆ ಸಹಕಾರಿ ವ್ಯವಸಾಯಕ ಬ್ಯಾಂಕಿನ ಅಧ್ಯಕ್ಷರಾದ ಪುಷ್ಪರಾಜ್ ಚೌಟ ಮಾಣಿ , ಅನಂತಾಡಿ ಗ್ರಾಮ ಪಂಚಾಯತಿನ ಮಾಜಿ ಅಧ್ಯಕ್ಷರಾದ ಸನತ್ ಕುಮಾರ್ ರೈ, ಮಾಣಿ ಶಾಲಾಭಿವೃದ್ದಿ ಸಮಿತಿ ಅದ್ಯಕ್ಷ ಹರೀಶ್ .ಮಾಣಿ,ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಗಣೇಶ್ ರೈ ಸಾಗು, ಹರೀಶ್ ಕುಲಾಲ್,ನರಸಿಂಹ ಶೆಟ್ಟಿ ಮಾಣಿ, ಅಶೋಕ್ ಶೆಟ್ಟಿ, ಗಂಗಾಧರ ಗೌಡ, ಮೋಹನ್ ಗೌಡ, ಯತೀಶ್ ಶೆಟ್ಟಿ ತೋಟ, ಪ್ರಮಿತ್ ಶೆಟ್ಟಿ, ಪ್ರಜ್ವಲ್ ಶೆಟ್ಟಿ, ವನಿತಾ, ಸುನಿತಾ ಮೊದಲಾದವರು ಉಪಸ್ಥಿತರಿದ್ದರು.

