ಸುಳ್ಯ ಪೊಲೀಸ್ ಠಾಣೆಗೆ ನೂತನ ಹೆಡ್ ಕಾನ್ಸೆಬಲ್ ಆಗಿ ಸ್ಕರಿಯ ರವರು ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಸ್ಕರಿಯ ಇವರು 29 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, 2005 ರಿಂದ 2011 ರ ವರೆಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಕಾಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ಮಂಗಳೂರು ಪೂರ್ವ ಪೊಲೀಸ್ ಠಾಣೆ, ಪುತ್ತೂರು ಸಂಚಾರ ಠಾಣೆ, ಡಿ. ಸಿ. ಬಿ ಮಂಗಳೂರು, ಪುತ್ತೂರು ನಗರ ಠಾಣೆ ಮುಂತಾದ ಕಡೆಗಳಲ್ಲಿ ಕರ್ತವ್ಯ ನಿರ್ವಹಿಸಿದ ಇವರು ಇದೀಗ ಸುಳ್ಯ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡು ಬಂದಿರುತ್ತಾರೆ. ಇವರು ಕಡಬ ತಾಲೂಕು ಬಲ್ಯ ಗ್ರಾಮದ ಮಾತ್ರಡಿ ಮನೆ ದಿ. ಎಂ.ಜಿ.ಅಬ್ರಹಾಂ ಹಾಗೂ ದಿ. ಸಾರಮ್ಮ ಅಬ್ರಹಾಂ ದಂಪತಿಯ ಪುತ್ರರಾಗಿದ್ದಾರೆ.


























