ಪುತ್ತೂರು: ಕಲ್ಲಾರೆ ಶ್ರೀ ಗುರುರಾಘವೇಂದ್ರ ಸ್ವಾಮಿ ಮಠದಲ್ಲಿ ಆ.23ರಿಂದ ಶ್ರೀ ಗುರು ಸಾರ್ವಭೌಮರ 350ನೇ ಆರಾಧನಾ ಮಹೋತ್ಸವ ಆರಂಭಗೊಂಡಿದೆ.

ಆ.24ರಂದು ವಿಶೇಷ ಆರಾಧನೆ, ಫಲ ಪಂಚಾಮೃತಾಭಿಷೇಕ, ಭಜನೆ, ಮಹಾಪೂಜೆ, ಪಲ್ಲಕಿ ಉತ್ಸವ, ರಥೋತ್ಸವ ನಡೆಯಿತು.

ಮಠದ ಪ್ರಧಾನ ಅರ್ಚಕ ರಾಘವೇಂದ್ರ ಉಡುಪ ರವರ ವೈದಿಕತ್ವದಲ್ಲಿ ಮಠದ ಕಾರ್ಯದರ್ಶಿ ಯು ಪೂವಪ್ಪ ಅವರ ಉಪಸ್ಥಿತಿಯಲ್ಲಿ ಕೋವಿಡ್ ಮಾರ್ಗಸೂಚಿಯಂತೆ ಸರಳ ರೀತಿಯಲ್ಲಿ ಮಹೋತ್ಸವ ಜರುಗಿತು.

