ಪುತ್ತೂರು : ಕರ್ನಾಟಕ ರಾಜ್ಯ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನ ಬೆಂಗಳೂರು ಇದರ ಅವಿಭಜಿತ ದ. ಕ. ಜಿಲ್ಲೆಯ ನಿರ್ದೇಶಕರಾಗಿ ಪುತ್ತೂರು ಪಿ. ಎಲ್. ಡಿ. ಬ್ಯಾಂಕ್ ನ ನಿರ್ದೇಶಕರಾದ ರಾಜಶೇಖರ್ ಜೈನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ರಾಜ್ಯಾದ್ಯಂತ ಪ್ರತಿ ಜಿಲ್ಲಾ ಮಟ್ಟದಲ್ಲಿ ಈ ಸ್ಥಾನಕ್ಕೆ ದ. 27ರಂದು ಚುನಾವಣೆ ನಡೆಯಲಿದ್ದು ಉಡುಪಿ ಮತ್ತು ದ. ಕ. ಜಿಲ್ಲೆಗೆ ರಾಜಶೇಖರ್ ಜೈನ್ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.
ಈ ಮೂಲಕ ಪುತ್ತೂರು ಗ್ರಾಮೀಣಾಭಿವೃದ್ಧಿ ಬ್ಯಾಂಕಿಗೆ 27 ವರ್ಷದ ನಂತರ ಈ ಅವಕಾಶ ಲಭಿಸಿದೆ. ತಾನು ಅವಿರೋಧವಾಗಿ ಆಯ್ಕೆಗೊಳ್ಳಲು ದ. ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಎಮ್. ಎನ್. ರಾಜೇಂದ್ರ ಕುಮಾರ್ ಹಾಗೂ ಪುತ್ತೂರು ಶಾಸಕ ಸಂಜೀವ ಮಠಂದೂರು ಸಹಕಾರವಿದೆ ಎಂದು ರಾಜಶೇಖರ್ ಜೈನ್ ಹೇಳಿದ್ದಾರೆ. ಇವರು ಈಗಾಗಲೇ ಬನ್ನೂರು ರೈತರ ಸೇವಾ ಸಹಕಾರ ಸಂಘದ ಉಪಾಧ್ಯಕ್ಷರಾಗಿ, ಸ್ಕ್ಯಾಡ್ ನ ನಿರ್ದೇಶಕರಾಗಿ, ದ. ಕ. ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕರಾಗಿ, ಪುತ್ತೂರು ಜೈನ್ ಮಿಲನ್ ಅಧ್ಯಕ್ಷರಾಗಿ, ದ. ಕ. ಜಿಲ್ಲಾ ಜೈನ ವಿದ್ಯಾವರ್ಧಕ ಸಂಘದ ನಿರ್ದೇಶಕರಾಗಿ ಸೇವೆ ಸಲ್ಲಿಸಿರುತ್ತಾರೆ.