ಗ್ರಾಮ ಪಂಚಾಯತ್ ಚುನಾವಣೆಯ ಕಂಪು ಎಲ್ಲಾ ಕಡೆಗಳಲ್ಲಿಯೂ ಬಿಸಿ ಮುಟ್ಟಿಸಿದಂತಿತ್ತು.. ರೋಚಕ ಪೈಪೋಟಿಯ ಚುನಾವಣೆಯಲ್ಲಿ ಗೆಲುವು ಯಾರಿಗೆ ದೊರೆಯಲಿದೆ? ಅಧಿಕಾರದ ಚುಕ್ಕಾಣಿ ಹಿಡಿಯುವ ನಾಯಕ ಯಾರು? ಎಂಬೆಲ್ಲಾ ಕುತೂಹಲದ ಪ್ರಶ್ನೆಗಳಿಗೂ ತೆರೆ ಬೀಳುವ ಸಮಯ ಬಂದಿದೆ.
ಚುನಾವಣಾ ಲೆಕ್ಕ ಭಾರೀ ಆಸಕ್ತಿದಾಯಕವಾಗಿ ನಡೆಯುತ್ತಿದ್ದು, ಪುತ್ತೂರಿನ ವಿವೇಕಾನಂದ ತೆಂಕಿಲ ಬೈಪಾಸ್ ರಸ್ತೆಯಲ್ಲಿ ಗ್ರಾಮ ಪಂಚಾಯತ್ ಚುನಾವಣೆ ಮತ ಎಣಿಕೆ ಆರಂಭವಾಗಿದೆ..ಈ ಮೂಲಕ ಸದ್ಯದಲ್ಲೇ ಗೆಲುವಿನ ಗದ್ದುಗೆಯನೇರುವ ನಾಯಕಗಳು ಯಾರು ಎಂಬ ಪ್ರಶ್ನೆಗೆ ಉತ್ತರವೂ ಲಭ್ಯವಾಗಲಿದೆ.