ಪುತ್ತೂರು : ದ. ಕ. ಜಿಲ್ಲಾ ಮರಾಠಿ ಸಂರಕ್ಷಣಾ ಸಮಿತಿಯ ವತಿಯಿಂದ ಮರಾಠಿ ಸಮಾಜ ಬಾಂಧವರಿಗಾಗಿ ಬಾಲಕೃಷ್ಣ ಬೊಮ್ಮರ್ ರವರ ನೇತೃತ್ವದಲ್ಲಿ ಚೆಂಡೆ ವಾದನ ತರಬೇತಿಯ ಉದ್ಘಾಟನೆಯು ದ. 27ರಂದು ಬೊಳುವಾರು ಎಕ್ಸಿಸ್ ಬ್ಯಾಂಕ್ ಕಟ್ಟಡದ ಮೂರನೇ ಮಹಡಿಯಲ್ಲಿರುವ ಸಮಿತಿ ಕಾರ್ಯಾಲಯದಲ್ಲಿ ನಡೆಯಿತು.

ಜಿಲ್ಲಾಧ್ಯಕ್ಷ ಅಶೋಕ್ ನಾಯ್ಕ ಕೆದಿಲರವರು ದೀಪ ಬೆಳಗಿಸಿ ಉದ್ಘಾಟಿಸಿ ತರಬೇತಿಗೆ ಚಾಲನೆ ನೀಡಿದರು. ಸಮಿತಿ ಸದಸ್ಯರಾದ ಸಾವಿತ್ರಿ ಉಮೇಶ್ ನಾಯ್ಕ, ಆನಂದ ನಾಯ್ಕ ಮಂಗಳೂರು, ದಯಾಕರ್ ಪಾಲ್ತಾಡಿ, ಬಾಲಕೃಷ್ಣ ನಾಯ್ಕ ನಿಡ್ಪಳ್ಳಿ, ಚಂದ್ರಿಕಾ ನಾಯ್ಕ ಮಂಗಳೂರು, ಜ್ಯೋತಿ ಅಶೋಕ್ ನಾಯ್ಕ, ಶಿವಪ್ರಸಾದ್ ನಾಯ್ಕ, ರವಿಕಿರಣ್ ಸೂರಂಬೈಲು ಮೊದಲಾದವರು ಉಪಸ್ಥಿತರಿದ್ದರು. ತರಬೇತಿಯು ಬೊಳುವಾರಿನ ಜಿಲ್ಲಾ ಕಛೇರಿಯಲ್ಲಿ ನಡೆಯಲಿದ್ದು ತರಬೇತಿ ಪಡೆಯಲಿಚ್ಚಿಸುವ ಸಮಾಜ ಬಾಂಧವರು ಸಾವಿತ್ರಿ ಉಮೇಶ್ ನಾಯ್ಕ್ ರವರ ದೂರವಾಣಿ 9480388844 ಸಂಪರ್ಕಿಸುವಂತೆ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
