ಪುತ್ತೂರು: ಡಬ್ಲ್ಯೂ. ಎಸ್.ಎಸ್ ಸ್ಪೋರ್ಟ್ಸ್ ವತಿಯಿಂದ ಆಯೋಜಿಸಿದ “ಗ್ಲೋಬಲ್ ವರ್ಲ್ಡ್ ರೆಕಾರ್ಡ್” ನಲ್ಲಿ ನಿಶ್ಚಲ್ ಕೆ. ಜಿ. ಯೋಗಾಸನ ವಿಭಾದಲ್ಲಿ ಮೂರು ದಾಖಲೆ ಮಾಡಿದ್ದಾರೆ.

ಜು.20 ರಂದು ನಿಶ್ಚಲ್ ಒಂದು ನಿಮಿಷದಲ್ಲಿ ಐದು ಆಸನ ಮಾಡಿ ದಾಖಲೆ ಮಾಡಿದ್ದಾರೆ. ಹಾಗೂ ಜು.23 ರಂದು ಐದು ನಿಮಿಷದಲ್ಲಿ ಐದು ಆಸನ ಮಾಡಿ ಇನ್ನೊಂದು ದಾಖಲೆ ಮಾಡಿದ್ದಾರೆ. ಹಾಗೂ ಜು.20 ರಂದು ತಮಿಳುನಾಡಿನ School Games Develepment foundation ವತಿಯಿಂದ ಆಯೋಜಿಸಿದ ಅಬ್ದುಲ್ ಕಲಾಂ ವರ್ಲ್ಡ್ ರೆಕಾರ್ಡ್ ನಲ್ಲಿ ಒಂದು ಆಸನವನ್ನು ಐದು ನಿಮಿಷ ಹಿಡಿತದಲ್ಲಿಟ್ಟುಕೊಂಡು ದಾಖಲೆ ಮಾಡಿದ್ದಾರೆ.
ನಿಶ್ಚಲ್ ವಿವೇಕಾನಂದ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಯಾಗಿದ್ದು, ನೆಹರು ನಗರ ನಿವಾಸಿ ಪಿ.ಎಮ್.ಜಿ.ಎಸ್.ವೈ ಇಂಜಿನಿಯರ್ ಜನಾರ್ಧನ ಗೌಡ ಹಾಗೂ ಜ್ಯೋತಿ ದಂಪತಿಗಳ ಪುತ್ರರಾಗಿದ್ದಾರೆ.