ಈ ಕೃಷ್ಣ ಜನ್ಮಾಷ್ಟಮಿಗೆ ಬಾಲಕೃಷ್ಣನ ಮುದ್ದಾದ ರೂಪ ಧರೆಗಿಳಿದಿದೆ. ಫೋಟೋಗ್ರಫಿಯಲ್ಲಿ ಈಗಾಗಲೇ ಟ್ರೆಂಡ್ ಕ್ರಿಯೇಟ್ ಮಾಡಿರುವ ‘ರಕ್ಷಿತ್ ಚಿನ್ನು ಫೋಟೋಗ್ರಫಿ’ ಝಲಕ್ ಇಲ್ಲಿದೆ.
ಈ ಜನ್ಮಾಷ್ಟಮಿಗೆ ರಕ್ಷಿತ್ ಅವರು ಎರಡು ಕೃಷ್ಣ ಫೋಟೋಗ್ರಫಿ ಮಾಡಿದ್ದು, ಒಂದರಲ್ಲಿ ಪ್ರದೀಪ್ ಆಚಾರ್ಯ ಮೇಕಪ್ ಆರ್ಟಿಸ್ಟ್ ಆಗಿ, ಸಾನ್ವಿ ರಾಜೇಶ್ ಕೃಷ್ಣನಾಗಿ ಕಂಗೊಳಿಸಿದ್ದಾರೆ.
ಇನ್ನೊಂದೆಡೆ ಆರ್ವಿ ಪ್ರೀತಂ ಕೃಷ್ಣನಾಗಿ ಬಣ್ಣ ಹಚ್ಚಿದ್ದು ನರ್ತನಾ ಆರ್ಟ್ ಮೇಕಪ್ ಮಾಡಿದ್ದಾರೆ.
ಇನ್ನು ವಿಭಿನ್ನ ಫೋಟೋಗ್ರಫಿಗೆ ಕ್ಯಾಮರಾ ಸಹಾಯಕರಾಗಿ ವಿಕ್ರಂ ರಾವ್, ಬೆಳಕಿನ ಸಹಾಯಕರಾಗಿ ಸಂತೋಷ್ ಪರಿವಾರ್ ಹಾಗೂ ಅನೂಪ್ ಮಂಜೇಶ್ವರ್ ಸಹಕರಿಸಿದ್ದಾರೆ.