ಕಡಬ: ಮುಂಬೈಯಿಂದ ಪ್ರಕಟಗೊಳ್ಳುವ ‘ಪರಿವರ್ತನಾ ಸುದ್ದಿ’ ಮಾಸ ಪತ್ರಿಕೆಯ ಸಂಪಾದಕ ಜನಾರ್ಧನ ಪುರಿಯ ರವರು ಆ.27ರ ರಾತ್ರಿ ನಿಧನ ಹೊಂದಿದ್ದಾರೆ.
ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಕಡಬ ಘಟಕದ ಗೌರವಾಧ್ಯಕ್ಷರಾಗಿದ್ದ ಇವರ ಸಂಪಾದಕತ್ವದಲ್ಲಿ ಪರಿವರ್ತನಾ ಸುದ್ದಿ ಎಂಬ ಮಾಸ ಪತ್ರಿಕೆ ಮುಂಬೈಯಲ್ಲಿ ಪ್ರಕಟಗೊಳ್ಳುತ್ತಿತ್ತು. ಆ ಪತ್ರಿಕೆಯನ್ನು ಕಡಬದಿಂದಲೂ ಪ್ರಕಟಿಸುತ್ತಿದ್ದರು.

ಮೃತರು ಪತ್ನಿ ಪ್ರೇಮ, ಪುತ್ರ ಪ್ರತೀಕ್,ಪುತ್ರಿ ಪ್ರಿಯಾಂಕ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಕುಟ್ರುಪಾಡಿ ಗ್ರಾಮದ ಪುರಿಯ ನಿವಾಸಿಯಾಗಿದ್ದ ಜನಾರ್ದನರವರುಪ್ರಸ್ತುತ ಮುಂಬೈಯಲ್ಲಿ ವಾಸವಾಗಿದ್ದರು. ಇತ್ತೀಚಿಗೆ ಸತತ ಅನಾರೋಗ್ಯಕ್ಕೆ ತುತ್ತಾದ ಅವರು ಎರಡು ಬಾರಿ ಮುಂಬೈಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಆ.27 ರ ರಾತ್ರಿ ಮುಂಬೈಯ ತನ್ನ ನಿವಾಸದಲ್ಲಿ ಪುನ: ಅಸ್ವಸ್ಥಗೊಂಡ ಜನಾರ್ಧನ್ ರವರು ಕೊನೆಯಸಿರುಳೆದಿದ್ದಾರೆ ಎಂದು ತಿಳಿದು ಬಂದಿದೆ.