ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಕ್ಕಳಿಗೆ ಧಾರ್ಮಿಕ ಶಿಕ್ಷಣದ ತರಗತಿಗಳನ್ನು ನೀಡಲು ಯೋಚಿಸಿದ್ದು, ಇದನ್ನು ವಿಶ್ವ ಹಿಂದೂ ಪರಿಷದ್ ಮತ್ತು ಭಜರಂಗದಳ ಅತ್ಯಂತ ಹರ್ಷದಿಂದ ಸ್ವಾಗತಿಸುತ್ತಿದೆ. ಮತ್ತು ಇದಕ್ಕೆ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸುತ್ತಿದ್ದೇವೆ ಎಂದು ಧಾರ್ಮಿಕ ದತ್ತಿ ಇಲಾಖೆಯ ಜಿಲ್ಲಾ ಸದಸ್ಯ ಮುರಳಿಕೃಷ್ಣ ಹಸಂತಡ್ಕ ಹೇಳಿದರು.
ಈ ರೀತಿಯ ದಿಟ್ಟ ನಿಲುವನ್ನು ತೆಗೆದುಕೊಂಡಿರುವಂತಹ ಆಡಳಿತ ಮಂಡಳಿಯ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಕೇಶವ ಪ್ರಸಾದ್ ಮುಳಿಯ ಮತ್ತು ಅವರ ತಂಡಕ್ಕೆ ಹಾರ್ದಿಕವಾಂತಹ ಕೃತಜ್ಞತೆಗಳನ್ನು ಹಿಂದೂ ಸಮಾಜದ ಪರವಾಗಿ ಸಲ್ಲಿಸುತ್ತಿದ್ದೇವೆ. ದೇವಸ್ಥಾನಗಳು ಭಕ್ತಿ, ಭಾವನೆಗಳ ಕೇಂದ್ರವಾಗಬೇಕೆನ್ನುವ ದೃಷ್ಟಿಯಿಂದ ಅಲ್ಲಿ ಅನ್ಯ ಚಟುವಟಿಕೆಗಳು ನಡೆಯಬಾರದು ಮತ್ತು ಭಕ್ತರಿಗೆ ತೊಂದರೆಯಾಗಬಾರದು ಎನ್ನುವಂತಹ ದೃಷ್ಟಿಯಿಂದ ದೇವಸ್ಥಾನದ ಗದ್ದೆಯಲ್ಲಿ ವಾಹನ ಪಾರ್ಕಿಂಗ್ ಗೆ ಭಕ್ತಾಧಿಗಳಿಗೆ ಮಾತ್ರ ಎನ್ನುವಂತಹ ನಿಲುವನ್ನು ಮಾಡಿದ್ದಾರೆ. ಇದು ಸರಿಯಾದಂತಹ ನಿಲುವು ಮತ್ತು ಒಳ್ಳೆಯ ವಿಚಾರವಾಗಿದೆ. ಧಾರ್ಮಿಕ ಶಿಕ್ಷಣ ಮತ್ತು ಸಂಸ್ಕಾರವನ್ನು ಮಕ್ಕಳಿಗೆ ಕಲಿಸುವಂತಹ ಕಾರ್ಯ, ಇದು ಇತರ ಎಲ್ಲಾ ಧಾರ್ಮಿಕ ಕೇಂದ್ರಗಳಿಗೆ, ದೇವಸ್ಥಾನಗಳಿಗೆ ಮಾದರಿಯಾಗಲೀ ಮತ್ತು ಪ್ರೇರಣೆಯಾಗಲಿ ಎಂದರು.