ಪುತ್ತೂರು: ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ ರೈ ಹಾಗೂ ಬ್ಲಾಕ್ ಉಪಾಧ್ಯಕ್ಷ ಜಿ ಮಹಾಬಲ ರೈ ಯವರ ನೇತ್ರತ್ವದಲ್ಲಿ ಆರ್ಯಾಪು ವಲಯ ಕಾಂಗ್ರೆಸ್ ಅಧ್ಯಕ್ಷ ಪ್ರಜ್ವಲ್ ರೈ ಯವರ ಅಧ್ಯಕ್ಷತೆಯಲ್ಲಿ ಒಳತಡ್ಕ ಭಾಗದ ಕಾಂಗ್ರೆಸ್ ಕಾರ್ಯಕರ್ತರ ಸಭೆಯು ಹಿರಿಯ ಕಾಂಗ್ರೆಸ್ ಮುಖಂಡ ಮೊಯಿದಿನ್ ಕುಂಜಿ ಕೊಪ್ಪಲ ರವರ ಮನೆಯಲ್ಲಿ ನಡೆಯಿತು. ಸಭೆಯಲ್ಲಿ ಆರ್ಯಾಪು ಬ್ಲಾಕ್ 1ಮತ್ತು 2 ರ ಬೂತ್ ಗಳಿಗೆ ಸಮಿತಿ ರಚಿಸಲಾಯಿತು.
ಈ ಕಾರ್ಯಕರ್ತರ ಸಭೆಯಲ್ಲಿ ಒಳತಡ್ಕ, ಕುಂಜೂರುಪಂಜ, ಬಂಗಾರಡ್ಕ, ನೇಲ್ಯಡ್ಕ ಬಾಗದಲ್ಲಿ ಕಾಂಗ್ರೆಸ್ ಪಕ್ಷವನ್ನು ತಲ ಮಟ್ಟದಲ್ಲಿ ಸಂಘಟಿಸಲು ಹಾಗೂ ಜನಸಾಮಾನ್ಯರಿಗೆ ಬಿಜೆಪಿ ಸರಕಾರದಿಂದ ಆಗುವ ತೊಂದರೆಗಳ ಬಗ್ಗೆ ಹೇಳುವಂತೆ ಬ್ಲಾಕ್ ಅಧ್ಯಕ್ಷ ಎಂ ಬಿ ವಿಶ್ವನಾಥ ರೈ ಯವರು ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ಸಭೆಯಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಮೊಯಿದಿಕುಂಜಿ ಕೊಪ್ಪಲ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ ರೈ ಯವರನ್ನು ಸ್ಥಳೀಯ ಕಾರ್ಯಕರ್ತರು ಶಾಲು ಹೊದಿಸಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟಣೆಯ ಅಧ್ಯಕ್ಷ ಸಂತೋಷ ಭಂಡಾರಿ ಚಿಲ್ಮೆತ್ತಾರ್ ಉಪಸ್ಥಿತರಿದ್ದು, ಆರ್ಯಾಪು ವಲಯ ಕಾಂಗ್ರೆಸ್ ನ ಪದಾಧಿಕಾರಿಗಳ ಸ್ಥಾನಕ್ಕೆ ಜೈನುದ್ದಿನ್ ಕೊಪ್ಪಳ ಹಾಗೂ ಬಾತೀಷ ಕೊಪ್ಪಳ ರವರ ಹೆಸರನ್ನು ಸೂಚಿಸಲಾಯಿತು.
ಬೂತ್ ಸಮಿತಿ ರಚನೆ ಆರ್ಯಾಪು -1
- ಅಧ್ಯಕ್ಷರು : ಪುರುಷೋತ್ತಮ ಪ್ರಭು ಜಂಗಮಗೇರು
- ಉಪಾಧ್ಯಕ್ಷರು : ಅಣ್ಣಿ ಪೂಜಾರಿ ಮೇಗಿನಪಂಜ
- ಕಾರ್ಯದರ್ಶಿ : ಸಂತೋಷ್ ಮೇಗಿನಪಂಜ
- ಸದಸ್ಯರು : ಶ್ರೀಮತಿ ನಯನ, ರಾಮನಾಯ್ಕ ಮೇಗಿನಪಂಜ, ಇಸ್ಮಾಯಿಲ್ ಡೆಂಜಿ ಬಾಗಿಲು
ಆರ್ಯಾಪು -2
- ಅಧ್ಯಕ್ಷರು : ಗೋಪಾಲಕೃಷ್ಣ ಸುವರ್ಣ
- ಉಪಾಧ್ಯಕ್ಷರು : ಅನೀಸ್ ಪಿಲಿಪಾಂಜರ
- ಕಾರ್ಯದರ್ಶಿ: ಅಶ್ರಫ್ ಕೊಪ್ಪಳ
- ಸದಸ್ಯರು : ಇಸ್ಮಾಯಿಲ್ ಕೊಪ್ಪಳ, ಶ್ರೀಮತಿ ಇಂದಿರಾ ದಿನೇಶ್, ಶ್ರೀಮತಿ ವನಿತಾ ಆಚಾರ್ಯ, ನಾರಾಯಣ ಯು ಒಳತಡ್ಕ, ಮಹಮ್ಮದ್ ಸಲೀಮ್, ಜಿಯಾದ್ ಒಳತಡ್ಕ, ಫಯಾಜ್ ಒಳತಡ್ಕ, ಚೆನ್ನಪ್ಪ ಯು, ದಿನೇಶ್ ಯು