ಉಪ್ಪಿನಂಗಡಿ: ಇಲ್ಲಿನ ರಾಮಕುಂಜ ವ್ಯಾಪ್ತಿಯ ಕೆಮ್ಮಾರದಲ್ಲಿ ನದಿ ನೀರಿನ ಸೆಳೆತಕ್ಕೆ ಸಿಲುಕಿ ನೀರುಪಾಲಾದ ಯುವಕನ ಮೃತದೇಹ ಗುರುವಾರ ಸಂಜೆ ಪತ್ತೆಯಾಗಿದೆ.

ಬುಧವಾರ ಸಂಜೆ ಕೆಮ್ಮಾರ ಸೇತುವೆಯ ಬಳಿ ಸ್ಥಳೀಯ ನಿವಾಸಿ ಶಫೀಕ್(19) ಎಂಬಾತ ನೀರುಪಾಲಾಗಿದ್ದ. ಇದೀಗ ಆತನ ಮೃತದೇಹ ಉಪ್ಪಿನಂಗಡಿಯ ನೇತ್ರಾವತಿ ಸೇತುವೆ ಕೆಳಗಡೆ ಅಗ್ನಿ ಶಾಮಕದಳದ ಸಿಬ್ಬಂದಿಗಳು ಪತ್ತೆ ಹಚ್ಚಿದ್ದಾರೆ.