ಪುತ್ತೂರು: ಕಲ್ಲಾರೆ ಶ್ರೀ ಗುರುರಾಘವೇಂದ್ರ ಸೇವಾ ಸಮಿತಿಯಿಂದ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ 40ನೇ ಶನೈಶ್ವರ ಕಲ್ಪೊಕ್ತ ಪೂಜೆ ಸೆ.4 ರಂದು ನಡೆಯಿತು.
ಮಠದ ಕಾರ್ಯದರ್ಶಿ ಯು. ಪೂವಪ್ಪ ರವರ ಉಪಸ್ಥಿತಿಯಲ್ಲಿ ಮಠದ ಪ್ರಧಾನ ಅರ್ಚಕ ರಾಘವೇಂದ್ರ ಉಡುಪ ರವರ ನೇತೃತ್ವದಲ್ಲಿ ಸಂಜೆ ಕಲಶಪೂಜೆ ನಡೆದು ಮಹಾಪೂಜೆ ನಡೆಯಿತು.
ಮಹಾಪೂಜೆಯಲ್ಲಿ ಪ್ರಾರ್ಥನೆ ನೆರವೇರಿಸಿದ ರಾಘವೇಂದ್ರ ಉಡುಪ ರವರು, ಶನಿಪೂಜೆಯಿಂದ ನಮ್ಮ ಇಷ್ಟಾರ್ಥ ಸಿದ್ದಿಯಾಗುವುದರ ಜೊತೆಗೆ ದೇಶಕ್ಕೆ ಬಂದಂತಹ ಕೊರೊನಾ ವ್ಯಾಧಿಯನ್ನು ಶಮನಗೊಳಿಸಬೇಕು. ಅನಿಷ್ಠ ನಿವಾರಣೆಗೆ ದೇವತಾನುಗ್ರಹ ಖಂಡಿತವಾಗಿಯೂ ಸಿಗಲಿದೆ ಎಂದು ಪ್ರಾರ್ಥನೆ ಮಾಡಿದರು.
ಈ ಸಂದರ್ಭದಲ್ಲಿ ಕಲ್ಲಾರೆ ಶ್ರೀ ಗುರುರಾಘವೇಂದ್ರ ಸೇವಾ ಸಮಿತಿ ಪದಾಧಿಕಾರಿಗಳು, ಸದಸ್ಯರು, ಸ್ಥಳೀಯ ಭಕ್ತರು ಉಪಸ್ಥಿತರಿದ್ದರು.