Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಪುತ್ತೂರಲ್ಲಿ ವಂದೇ ಭಾರತ್‌ ನಿಲುಗಡೆಗೆ ಆನ್‌ಲೈನ್ ಅಭಿಯಾನ; 2,500ಕ್ಕೂ ಅಧಿಕ ಸಹಿ ಸಂಗ್ರಹ..!

    ಪುತ್ತೂರಲ್ಲಿ ವಂದೇ ಭಾರತ್‌ ನಿಲುಗಡೆಗೆ ಆನ್‌ಲೈನ್ ಅಭಿಯಾನ; 2,500ಕ್ಕೂ ಅಧಿಕ ಸಹಿ ಸಂಗ್ರಹ..!

    ಬೆಳ್ತಂಗಡಿ: ವಾಹನ ಡಿಕ್ಕಿ ಮೂಲಕ ಕೊಲೆಗೆ ಯತ್ನ: ಆರೋಪಿ ಬಂಧನ..!!

    ಬೆಳ್ತಂಗಡಿ: ವಾಹನ ಡಿಕ್ಕಿ ಮೂಲಕ ಕೊಲೆಗೆ ಯತ್ನ: ಆರೋಪಿ ಬಂಧನ..!!

    ಪುತ್ತೂರಿನಲ್ಲಿ ಅಕ್ರಮ ಜಾನುವಾರು ಸಾಗಾಟ: ಮೂರು ಜಾನುವಾರುಗಳ ರಕ್ಷಣೆ, ಆರೋಪಿ ಬಂಧನ..!

    ಪುತ್ತೂರಿನಲ್ಲಿ ಅಕ್ರಮ ಜಾನುವಾರು ಸಾಗಾಟ: ಮೂರು ಜಾನುವಾರುಗಳ ರಕ್ಷಣೆ, ಆರೋಪಿ ಬಂಧನ..!

    ಉಪ್ಪಿನಂಗಡಿ: ಕಾಲೇಜಿನಲ್ಲಿ ಹಿಜಾಬ್ ಪ್ರಕರಣ.! ವರದಿ ಮಾಡಲು ತೆರಳಿದ ಮಾಧ್ಯಮದವರ ಮೇಲೆಯೇ FIR ದಾಖಲು.!!

    ದರ್ಬೆ ಗಲಾಟೆ ಪ್ರಕರಣ: ಸಾಮಾಜಿಕ ಜಾಲತಾಣದಲ್ಲಿ ಬಂದ್‌ಗೆ ಕರೆ- ಸಂಜೀವ ಮಠಂದೂರು ಫೇಸ್ಬುಕ್ ಖಾತೆ ವಿರುದ್ಧ ಪ್ರಕರಣ ದಾಖಲು..!

    ವಿವೇಕಾನಂದ ವಿದ್ಯಾವರ್ಧಕ ಸಂಘದ ಗಣೇಶೋತ್ಸವ ಅಲಂಕಾರಕ್ಕೆ ಕೇಸರಿ ಧ್ವಜ ಹಾರಿಸುವ ಮೂಲಕ ಚಾಲನೆ..!!

    ವಿವೇಕಾನಂದ ವಿದ್ಯಾವರ್ಧಕ ಸಂಘದ ಗಣೇಶೋತ್ಸವ ಅಲಂಕಾರಕ್ಕೆ ಕೇಸರಿ ಧ್ವಜ ಹಾರಿಸುವ ಮೂಲಕ ಚಾಲನೆ..!!

    ಪುತ್ತೂರಿನಲ್ಲಿ ಧಾರ್ಮಿಕ ವೈಮನಸ್ಸು ಮೂಡಿಸುವ ಸಂದೇಶ ಪ್ರಸಾರ: ಬಂದ್‌ಗೆ ಕರೆ ನೀಡಿದ ಆರೋಪದಲ್ಲಿ ಪ್ರಕರಣ ದಾಖಲು..!

    ಪುತ್ತೂರಿನಲ್ಲಿ ಧಾರ್ಮಿಕ ವೈಮನಸ್ಸು ಮೂಡಿಸುವ ಸಂದೇಶ ಪ್ರಸಾರ: ಬಂದ್‌ಗೆ ಕರೆ ನೀಡಿದ ಆರೋಪದಲ್ಲಿ ಪ್ರಕರಣ ದಾಖಲು..!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ನ್ಯೂಸ್ ಪುತ್ತೂರು

ಪುತ್ತೂರು: ಬ್ಲಾಕ್ ಕಾಂಗ್ರೆಸ್ ಮಾಸಿಕ ಸಭೆ:; ಮೋದಿ ಸರಕಾರದ ಲಂಗು ಲಗಾಮಿಲ್ಲದ ಆರ್ಥಿಕ ಹಾಗೂ ವಿದೇಶ ನೀತಿಯಿಂದ ದೇಶ ಸಂಕಷ್ಟಕ್ಕೆ ಸಿಲುಕಿದೆ – ಮಾಜಿ ಸಚಿವ ಯು ಟಿ ಖಾದರ್

September 4, 2021
in ಪುತ್ತೂರು, ರಾಜಕೀಯ
0
ಪುತ್ತೂರು: ಬ್ಲಾಕ್ ಕಾಂಗ್ರೆಸ್ ಮಾಸಿಕ ಸಭೆ:; ಮೋದಿ ಸರಕಾರದ ಲಂಗು ಲಗಾಮಿಲ್ಲದ ಆರ್ಥಿಕ ಹಾಗೂ ವಿದೇಶ ನೀತಿಯಿಂದ ದೇಶ ಸಂಕಷ್ಟಕ್ಕೆ ಸಿಲುಕಿದೆ –  ಮಾಜಿ ಸಚಿವ ಯು ಟಿ ಖಾದರ್
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement
Advertisement
Advertisement

ಪುತ್ತೂರು: ಕೇಂದ್ರದಲ್ಲಿ ಮೋದಿ ಸರಕಾರ ಅಧಿಕಾರಕ್ಕೆ ಬಂದು 8 ವರ್ಷದಲ್ಲಿ ದೇಶದ ಜನ ಸಾಮಾನ್ಯರನ್ನು ಸಂಕಷ್ಟದಲ್ಲಿ ಸಿಲುಕಿಸುವಂತಹ ಕಾನೂನು ಜಾರಿಗೆ ತಂದು, ಬಂಡವಾಳ ಶಾಹಿಗಳಾದ ಅಂಬಾನಿ ಮತ್ತು ಅದಾನಿಗಳ ಸಾಮ್ರಾಜ್ಯ ಗಳನ್ನು ಬೆಳೆಸಲು ತನ್ನ ಅಧಿಕಾರವನ್ನು ದೇಶದ ಶ್ರೀಮಂತರಿಗೆ ಒತ್ತೆ ಇಟ್ಟಿರುತ್ತಾರೆ ಇದರಿಂದ ದೇಶದ ಆರ್ಥಿಕ ನೀತಿಗೆ ಲಂಗು ಲಗಾಮು ಇಲ್ಲದಂತಾಗಿದೆ ಎಂದು ಮಾಜಿ ಸಚಿವ ಯು ಟಿ ಖಾದರ್ ಹೇಳಿದರು, ಅವರು ಪುತ್ತೂರು ಬ್ಲಾಕ್ ಕಾಂಗ್ರೆಸ್ ನ ಮಾಸಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

Advertisement
Advertisement
Advertisement

ಕಾಂಗ್ರೆಸ್ ಸರಕಾರ ಕಳೆದ 70 ವರ್ಷಗಳ ತನ್ನ ಆಡಳಿತ ಅವಧಿಯಲ್ಲಿ ಮಾಡಿದ್ದ ಸಾರ್ವಜನಿಕ ಸೊತ್ತು ಗಳನ್ನು ಒಂದೊಂದನ್ನೇ ಮೋದಿಯವರು ತನ್ನ ಸ್ನೇಹಿತ ಶ್ರೀಮಂತರಿಗೆ ಮಾರಾಟ ಮಾಡುತ್ತಿದ್ದಾರೆ. ಸರಕಾರದ ಬ್ಯಾಂಕ್ ಗಳನ್ನು ಕೂಡ ಮಾರಲು ಹೊರಟು ದೇಶವನ್ನು ದಾರಿದ್ರ್ಯ ದ ಕಡೆ ತಳ್ಳುತ್ತಿದ್ದಾರೆ, ಮನಮೋಹನ್ ಸಿಂಗ್ ರವರ ಕಾಂಗ್ರೆಸ್ ಸರಕಾರವಿದ್ದಾಗ ದೇಶದ GDP ಎಳೂವರೇ ಶೇಕಡ ವಿದ್ದ GDP ಕೋರೋನ ಬರುವ ಮೊದಲೇ ಶೇಕಡ 3 ಕ್ಕೆ ಇಳಿದಿತ್ತು, ಕೋರೋನ ಬಂದ ಮೇಲೆ GDP ನೆಲಕಚ್ಚಿದೆ ಎಂದರು.

ಬಡವರಿಗೆ ಸರಿಯಾಗಿ ರೇಷನ್ ಸಿಗುತ್ತಿಲ್ಲ, ನಾವು ಕೊಟ್ಟಿರುವ BPL ಕಾರ್ಡನ್ನು ರದ್ದು ಪಡಿಸುತ್ತಿದ್ದಾರೆ, ವೃದ್ಯಾಪ, ವಿಧವೆ, ಸಂದ್ಯಾ ಸುರಕ್ಷ ಯೋಜನೆಯ ಹಣ ಸಿಗುತ್ತಿಲ್ಲ ಅದೂ ಬಿಡಿ ಕೊನೆಗೆ ಶವ ಸಂಸ್ಕಾರಕ್ಕೂ ಹಣ ನೀಡಲು ಈ ಸರಕಾರಕ್ಕೆ ಗತಿ ಇಲ್ಲ, ನಮ್ಮ ವಿರೋಧಿಗಳಾದ ಪಾಕಿಸ್ತಾನ ಹಾಗೂ ಚೈನಾ ದೇಶಗಳು ಆಫಗಾನಿಸ್ತಾನ ನೆಲವನ್ನು ತಮ್ಮ ಹಿತಾಶಕ್ತಿಗೆ ಬಳಸಿಕೊಳ್ಳದಂತೆ ಭಾರತ ನೋಡಿ ಕೊಳ್ಳುತ್ತಿತ್ತು, ಅದಕ್ಕಾಗಿ ಆಫಗಾನಿಸ್ಥಾನಿ ದೇಶದಲ್ಲಿ ಒಳ್ಳೆಯ ಸಂಬಂಧವನ್ನು ಬೆಳೆಸಿ ಕೊಂಡಿದ್ದ ಭಾರತ ಆ ದೇಶದ ಅಭಿವೃದ್ಧಿ ಗೆ ಸಾಕಷ್ಟು ಸಹಕಾರ ನೀಡುತ್ತಿತ್ತು, ಆದರೆ ಈ ತಾಲಿಬಾನಿಗಳು ಆ ದೇಶ ವನ್ನು ವಶಪಡಿಸಿಕೊಂಡಿದೆ ಆದರೆ ಈ ಅಪಾಯಕಾರಿ ಬೆಳೆವಣಿಗೆಯ ಬಗ್ಗೆ ಪ್ರಧಾನಿ ಮೋದಿಯವರು ಚಕಾರವೆತ್ತದೆ ಮೌನವಾಗಿದ್ದಾರೆ. ಈ ಹಿಂದೆ ಕೆಲವು ದೇಶಗಳ ವಿದ್ಯಾಮಾನಗಳ ಬಗ್ಗೆ ಭಾರತ ದೇಶ ಆಲಿಪ್ತ ನೀತಿಯನ್ನು ಅನುಸರಿಸುತ್ತಿತ್ತು. ಆಗ ಉತ್ತಮ ವಿದೇಶ ನೀತಿಯನ್ನು ಹೊಂದಿ ಎಲ್ಲರಲ್ಲಿ ಸಂಬಂಧ ಚೆನ್ನಾಗಿ ಇಟ್ಟುಕೊಂಡಿತ್ತು ಆದರೆ ಪ್ರಧಾನಿ ಮೋದಿ ಅಮೇರಿಕಾದಂತಹ ದೇಶಗಳ ರಾಜಕೀಯದಲ್ಲಿ ಮೂಗು ತೂರಿಸಿ ಅಲ್ಲಿಯ ಅಧ್ಯಕ್ಷ ರೊಬ್ಬರ ಪರ ನಿಂತು ಅವರ ಪರ ಪ್ರಚಾರನಡೆಸಿ ಜಗತ್ತಿನಲ್ಲಿ ಭಾರತ ದೇಶದ ವರ್ಚಸ್ಸಿಗೆ ಕುಂದುತಂದಿರುತ್ತಾರೆ ಪ್ರಧಾನಿ ಮೋದಿಯವರ ಇಂತಹ ನಡೆವಳಿಕೆಗಳು ಮುಂದಿನ ದಿನಗಳಲ್ಲಿ ನಮ್ಮ ದೇಶಕ್ಕೆ ಸಂಕಷ್ಟ ತರಲಿದೆ ಎಂದರು.

Advertisement

ನಗರ ಕಾಂಗ್ರೆಸ್ ವರದಿ:

Advertisement

ನಗರ ಕಾಂಗ್ರೆಸ್ ಅಧ್ಯಕ್ಷ ಎಚ್ ಮಹಮ್ಮದ್ ಆಲಿ ಯವರು ಪುತ್ತೂರು ಬ್ಲಾಕ್ ನ ಕಾರ್ಯ ಚಟುವಟಿಕೆಯ ಬಗ್ಗೆ ಮಾಹಿತಿ ನೀಡಿ ನಗರ ಸಬಾ ಚುನಾವಣೆಗೆ ಇನ್ನೂ 4 ವರ್ಷಗಳ ಸಮಯವಿದ್ದು, ಇದೀಗ ಜಿಲ್ಲಾ ಪಂಚಾಯತ್, ತಾಲೂಕ್ ಪಂಚಾಯತ್ ನ ಚುನಾವಣೆ ಬಹಳ ಹತ್ತಿರ ಇರುವುದರಿಂದ ಗ್ರಾಮೀಣ ಭಾಗದ ಬೂತ್ ಸಮಿತಿಗಳನ್ನು ಬಲ ಪಡಿಸಲು ಬ್ಲಾಕ್ ಅಧ್ಯಕ್ಷರು ಮುಂದಾಗಿದ್ದು ಅವರೊಂದಿಗೆ ವಲಯ ಮಟ್ಟದ ಪಕ್ಷ ಸಂಘಟಣೆಗೆ ನಾನು ಕೈ ಜೋಡಿಸುತ್ತಿದ್ದೇನೆ. ಇನ್ನು ಕೆಲವು ದಿನಗಳ ಒಳಗೆ ನಗರ ಕಾಂಗ್ರೆಸ್ ಗೆ ಪದಾಧಿಕಾರಿಗಳನ್ನು ನೇಮಕಗೊಳಿಸಿ ನಗರ ಪ್ರದೇಶದಲ್ಲಿ ತಲಮಟ್ಟದಲ್ಲಿ ಪಕ್ಷವನ್ನು ಗಟ್ಟಿಗೊಳಿಸಲು ಕಾರ್ಯಯೋಜನೆ ಹಾಕಿಕೊಳ್ಳಲಾಗಿದೆ ಎಂದು ಹೇಳಿದರು.

ವಲಯ ಕಾಂಗ್ರೆಸ್ ಸಮಿತಿಯಿಂದ ವರದಿ ಮಂಡನೆ:

ವಲಯ ಅಧ್ಯಕ್ಷರುಗಳಾದ ಎ ಕೆ ಜಯರಾಮರೈ , ಬಾಬು ರೈ ಕೋಟೆ, ಪ್ರಜ್ವಲ್ ರೈ ತೊಟ್ಲ, ಪ್ರಕಾಶ್ ಪುರುಷರ ಕಟ್ಟೆ, ಅಶೋಕ ಪೂಜಾರಿ ಒಳಮೊಗರು, ಪುರಂದರ ರೈಕೊರಿಕ್ಕಾರು , ಆಬಿದ್ ಕುಕ್ಕಾಜೆ, ಗೋಪಾಲ ಕೃಷ್ಣ ಒಕ್ಕಲಿಗ, ನವೀನ್ ರೈ ಚೆಲ್ಯಡ್ಕ, ಮೂಸಾನ್ ಕರ್ನೂರ್,ಇಕ್ಬಾಲ್ ಹುಸೈನ್ ಕೌಡಿಚಾರ್ ಹಾಗೂ ಉಸ್ತುವಾರಿಗಳಾದ ಯಾಕೂಬು ಮುಲಾರ್, ಮನಮೋಹನ್ ರೈ, ರೋಷನ್ ರೈ ಬನ್ನೂರು, ಗೋಪಾಲ ಪಾಟಾಳಿ,ಇವರು ಕಳೆದ ಒಂದು ತಿಂಗಳಲ್ಲಿ ನಡೆಸಿದ ಪಕ್ಷ ಚಟುವಟಿಕೆಯ ಬಗ್ಗೆ ವರದಿ ಮಂಡಿಸಿದರು.

ಬ್ಲಾಕ್ ಕಾಂಗ್ರೆಸ್ ಮುಂಚೂಣಿ ಘಟಕದ ವರದಿ:

ಬ್ಲಾಕ್ ಮುಂಚೂಣಿ ಘಟಕದ ಅಧ್ಯಕ್ಷರುಗಳಾದ ವಿ ಎಚ್ ಎ ಶಕೂರ್ ಹಾಜಿ, ಶರೊನ್ ಸಿಕ್ವೆರಾ, ಕೇಶವ ಪಡೀಲ್, ಮೆಲ್ವಿನ್ ಮೊಂತೆರೊ, ಅಭಿಷೇಕ್ ಬೆಳ್ಳಿಪ್ಪಾಡಿ, ಹರೀಶ್ ನಿಡ್ಪಲ್ಲಿ, ಸಂತೋಷ ಭಂಡಾರಿ ಚಿಲ್ಮೆತ್ತಾರ್, ಸೇವಾದಾಳದ ವಿಶ್ವಜಿತ್ ಅಮ್ಮುಂಜೆ, ಮಹಿಳಾ ಕಾಂಗ್ರೆಸ್ ನ ಶ್ರೀಮತಿ ಶಾರದಾ ಅರಸ್, ತಮ್ಮ ಘಟಕಗಳ ಚಟುವಟಿಕೆಗಳ ವಿವರ ನೀಡಿದರು.

ಬ್ಲಾಕ್ ಕಾಂಗ್ರೆಸ್ ಮಾಸಿಕ ಸಭೆಯಲ್ಲಿ ಬಾಗವಹಿಸಿದ ಜಿಲ್ಲಾ ಸೇವಾದಳದ ಅಧ್ಯಕ್ಷ ಜೋಕಿಂ ಡಿ ಸೋಜಾ ರವರು ಸೇವಾದಳದ ಸಂಘಟಣೆಯ ಬಗ್ಗೆ ಹಾಕಿಕೊಂಡಿರುವ ಕಾರ್ಯಯೋಜನೆಯ ಬಗ್ಗೆ ಮಾಹಿತಿ ನೀಡಿದರು.

ಹಿರಿಯ ಕಾಂಗ್ರೆಸ್ಸಿಗರಿಗೆ ಸನ್ಮಾನ:
ಬ್ಲಾಕ್ ಕಾಂಗ್ರೆಸ್ ಮಾಸಿಕ ಸಭೆಯಲ್ಲಿ ಹಿರಿಯ ಕಾಂಗ್ರೆಸ್ಸಿಗರನ್ನು ಗುರುತಿಸಿ ಸನ್ಮಾನಿಸುವ ಕಾರ್ಯಕ್ರಮದಂತೆ ಒಳಮೊಗರು ವಲಯ ಕಾಂಗ್ರೆಸ್ ಮಾಜಿ ಅಧ್ಯಕ್ಷ ವಿಜಯ ಕುಮಾರ್ ರೈ ಮುಗೇರು. ಹಿರಿಯ ಕಾಂಗ್ರೆಸ್ ಮುಖಂಡರಾದ ಯು ಕೆ ಇಬ್ರಾಹಿಂ ಉಜಿರೋಡಿ, ಕೆಪಿ ಹಸನ್ ನೀರ್ಪಜೆ ರವರನ್ನು ಮಾಜಿ ಶಾಸಕಿ ಶ್ರೀಮತಿ ಶಕುಂತಲಾ ಟಿ ಶೆಟ್ಟಿ ಯವರು ಶಾಲು ಹಾಕಿ ಹಣ್ಣು ಹಂಪಲು ನೀಡಿ ಸನ್ಮಾನಿಸಿದರು.

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ:

ಈ ಸಂದರ್ಭದಲ್ಲಿ ಅಲ್ ಅಮೀನ್ ಮೆಡಿಕಲ್ ಕಾಲೇಜ್ ಬಿಜಾಪುರ ಇಲ್ಲಿ ಎಂ ಡಿ ( ಮೆಡಿಸಿನ್ )ಇದರಲ್ಲಿ ಟಾಪರ್ ಆಗಿರುವ ಹಾಗೂ ರಾಜೀವ್ ಗಾಂಧಿ ಯೂನಿವರ್ಸಿಟಿಯಲ್ಲೇ ಟಾಪರ್ ಆಗಿರುವ ಪುತ್ತೂರಿನ ನ್ಯಾಯವಾದಿ ಎಂ ಪಿ ಅಬೂಬಕ್ಕರ್ ರವರ ಸುಪುತ್ರಿಯಾಗಿರುವ ಡಾ. ಆಯಿಷತ್ ನಿಷಾದ್ ಎಂ ಪಿ ಇವರನ್ನು ಹಾಗೂ 10 ನೇ ತರಗತಿಯಲ್ಲಿ ಡಿಸ್ಟಿಂಕ್ಷನ್ ಪಡೆದಿರುವ ಅರ್ಯಾಪು ಗ್ರಾಮದ ಕುಂಜೂರು ಪಂಜ ನಿವಾಸಿ ಕಾಂಗ್ರೆಸ್ ಬೂತ್ ಅಧ್ಯಕ್ಷ ಪುರುಷೋತ್ತಮ ಪ್ರಭು ರವರ ಸುಪುತ್ರಿ ಅನುಶ್ರೀ ಜಿ ಪ್ರಭು ರವರನ್ನು ಮಾಜಿ ಶಾಸಕಿ ಶಕುಂತಲಾ ಟಿ ಶೆಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ ರೈ, ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಶ್ರೀಮತಿ ಶಾರದಾ ಅರಸ್ ರವರು ಸನ್ಮಾನಿಸಿದರು.

ಯಂಗ್ ಬ್ರಿಗೇಡ್ ವತಿಯಿಂದ ಸನ್ಮಾನ:
ಪುತ್ತೂರು ಯಂಗ್ ಬ್ರಿಗೇಡ್ ಸೇವಾದಾಳದ ವತಿಯಿಂದ ಕೋವಿಡ್ ಸಂದರ್ಭದಲ್ಲಿ ಉಚಿತ ಆಂಬುಲೆನ್ಸ್ ಸೇವೆ ಒದಗಿಸಿದ್ದು ಈ ಆಂಬುಲೆನ್ಸ್ ನ ಉಸ್ತುವಾರಿ ವಹಿಸಿಕೊಂಡು ಯಶಸ್ವಿ ಯಾಗಿ ನಿರ್ವಹಣೆ ಮಾಡಿರುವ ಶರೀಫ್ ಬಲ್ನಾಡ್, ಆಂಬುಲೆನ್ಸ್ ಚಾಲಕ ಉಬೇದುಲ್ಲಾರವರಿಗೆ ಹಾಗೂ ನೂತನವಾಗಿ ಆಯ್ಕೆಯಾಗಿರುವ NSUI ಪದಾಧಿಕಾರಿಗಳಾದ ರಾಜ್ಯ NSUI ಕೋ ಓರ್ಡಿನೇಟರ್ ಜೈನುದ್ದೀನ್ ಅತೂರು, NSUI ನ ಜಿಲ್ಲಾ ಪ್ರದಾನ ಕಾರ್ಯದರ್ಶಿ ತಮೀಜ್ ಕೋಲ್ಪೆ, ಜಿಲ್ಲಾ ಕಾರ್ಯದರ್ಶಿ ಲಸ್ಟರ್ ಪಿಂಟೋ, ಪುತ್ತೂರು NSUI ನ ನಿಯೋಜಿತ ಅಧ್ಯಕ್ಷೆ ವೀರ ಜನ್ನೀಫರ್ ಡಿ ಸೋಜಾ, ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ರಾಜ್ಯ ಪ್ರದಾನ ಕಾರ್ಯದರ್ಶಿ ಬಾತೀಶ ಅಳಕೆಮಜಲು ಇವರನ್ನು ಮಾಜಿ ಸಚಿವ ಯು ಟಿ ಖಾದರ್, ಮಾಜಿ ಶಾಸಕಿ ಶಕುಂತಲಾ ಟಿ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ ರೈ ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಸಹಕಾರಿ ಯೂನಿಯನ್ ನ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿಗಳಾದ ಫಝಲ್ ರಹೀಮ್, ಮಹೇಶ್ ಅಂಕೋತಿಮಾರ್, ಜಿಲ್ಲಾ ಕಾರ್ಯದರ್ಶಿ ಯಾಕೂಬು ಹಾಜಿ ದರ್ಬೆ, ಜಿಲ್ಲಾ ಕಾರ್ಮಿಕ ಘಟಕದ ಉಪಾಧ್ಯಕ್ಷ ರವೀಂದ್ರ ರೈ ನೆಕ್ಕಿಲು, ಜಿಲ್ಲಾ ಹಿಂದುಳಿದ ವರ್ಗ ವಿಭಾಗದ ಪ್ರದಾನ ಕಾರ್ಯದರ್ಶಿ ನಾರಾಯಣ ನಾಯಕ್ ಆರ್ಲಪದವು, ಜಿಲ್ಲಾ ಕಾರ್ಯದರ್ಶಿ ಶ್ರೀಧರ ಪೂಜಾರಿ ಚಾಲೆಪುಣಿ, ಯಂಗ್ ಬ್ರಿಗೇಡ್ ನ ಅಭಿಷೇಕ್ ಬೆಳ್ಳಿಪ್ಪಾಡಿ, ರಂಜಿತ್ ಬಂಗೇರ, ಹಾಗೂ ಬ್ಲಾಕ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಬ್ಲಾಕ್ ಉಪಾಧ್ಯಕ್ಷ ಆಲಿ ಕುಂಜಿ ಕೊರಿಂಗಿಲ, ಸ್ವಾಗತಿಸಿದರು, ಪ್ರದಾನ ಕಾರ್ಯದರ್ಶಿ ಅಮಲ ರಾಮಚಂದ್ರ ಬ್ಲಾಕ್ ಕಾಂಗ್ರೆಸ್ ನ ವರದಿಯನ್ನು ಮಂಡಿಸಿದರು. ಪ್ರಧಾನ ಕಾರ್ಯದರ್ಶಿ ಪೂರ್ಣೇಶ್ ಕುಮಾರ್ ಭಂಡಾರಿ ಕಾರ್ಯಕ್ರಮ ನಿರ್ವಹಣೆ ಮಾಡಿದರು.

Previous Post

ವಿಟ್ಲ -ಉಪ್ಪಿನಂಗಡಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾಗಿ ಶ್ರೀಮತಿ ಶಕುಂತಲಾ ಕುಲಾಲ್ ಕೆದಿಲ ನೇಮಕ

Next Post

ಕಲ್ಲಾರೆ: ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ ಶನೈಶ್ವರ ವೃತ್ತ ಕಲ್ಪೋಕ್ತ ಪೂಜೆ

OtherNews

ಪುತ್ತೂರಲ್ಲಿ ವಂದೇ ಭಾರತ್‌ ನಿಲುಗಡೆಗೆ ಆನ್‌ಲೈನ್ ಅಭಿಯಾನ; 2,500ಕ್ಕೂ ಅಧಿಕ ಸಹಿ ಸಂಗ್ರಹ..!
ಪುತ್ತೂರು

ಪುತ್ತೂರಲ್ಲಿ ವಂದೇ ಭಾರತ್‌ ನಿಲುಗಡೆಗೆ ಆನ್‌ಲೈನ್ ಅಭಿಯಾನ; 2,500ಕ್ಕೂ ಅಧಿಕ ಸಹಿ ಸಂಗ್ರಹ..!

August 24, 2026
ಬೆಳ್ತಂಗಡಿ: ವಾಹನ ಡಿಕ್ಕಿ ಮೂಲಕ ಕೊಲೆಗೆ ಯತ್ನ: ಆರೋಪಿ ಬಂಧನ..!!
ಕ್ರೈಮ್

ಬೆಳ್ತಂಗಡಿ: ವಾಹನ ಡಿಕ್ಕಿ ಮೂಲಕ ಕೊಲೆಗೆ ಯತ್ನ: ಆರೋಪಿ ಬಂಧನ..!!

August 23, 2026
ಪುತ್ತೂರಿನಲ್ಲಿ ಅಕ್ರಮ ಜಾನುವಾರು ಸಾಗಾಟ: ಮೂರು ಜಾನುವಾರುಗಳ ರಕ್ಷಣೆ, ಆರೋಪಿ ಬಂಧನ..!
ಪುತ್ತೂರು

ಪುತ್ತೂರಿನಲ್ಲಿ ಅಕ್ರಮ ಜಾನುವಾರು ಸಾಗಾಟ: ಮೂರು ಜಾನುವಾರುಗಳ ರಕ್ಷಣೆ, ಆರೋಪಿ ಬಂಧನ..!

August 23, 2026
ಉಪ್ಪಿನಂಗಡಿ: ಕಾಲೇಜಿನಲ್ಲಿ ಹಿಜಾಬ್ ಪ್ರಕರಣ.! ವರದಿ ಮಾಡಲು ತೆರಳಿದ ಮಾಧ್ಯಮದವರ ಮೇಲೆಯೇ FIR ದಾಖಲು.!!
Featured

ದರ್ಬೆ ಗಲಾಟೆ ಪ್ರಕರಣ: ಸಾಮಾಜಿಕ ಜಾಲತಾಣದಲ್ಲಿ ಬಂದ್‌ಗೆ ಕರೆ- ಸಂಜೀವ ಮಠಂದೂರು ಫೇಸ್ಬುಕ್ ಖಾತೆ ವಿರುದ್ಧ ಪ್ರಕರಣ ದಾಖಲು..!

August 23, 2026
ವಿವೇಕಾನಂದ ವಿದ್ಯಾವರ್ಧಕ ಸಂಘದ ಗಣೇಶೋತ್ಸವ ಅಲಂಕಾರಕ್ಕೆ ಕೇಸರಿ ಧ್ವಜ ಹಾರಿಸುವ ಮೂಲಕ ಚಾಲನೆ..!!
ಪುತ್ತೂರು

ವಿವೇಕಾನಂದ ವಿದ್ಯಾವರ್ಧಕ ಸಂಘದ ಗಣೇಶೋತ್ಸವ ಅಲಂಕಾರಕ್ಕೆ ಕೇಸರಿ ಧ್ವಜ ಹಾರಿಸುವ ಮೂಲಕ ಚಾಲನೆ..!!

August 23, 2026
ಪುತ್ತೂರಿನಲ್ಲಿ ಧಾರ್ಮಿಕ ವೈಮನಸ್ಸು ಮೂಡಿಸುವ ಸಂದೇಶ ಪ್ರಸಾರ: ಬಂದ್‌ಗೆ ಕರೆ ನೀಡಿದ ಆರೋಪದಲ್ಲಿ ಪ್ರಕರಣ ದಾಖಲು..!
Featured

ಪುತ್ತೂರಿನಲ್ಲಿ ಧಾರ್ಮಿಕ ವೈಮನಸ್ಸು ಮೂಡಿಸುವ ಸಂದೇಶ ಪ್ರಸಾರ: ಬಂದ್‌ಗೆ ಕರೆ ನೀಡಿದ ಆರೋಪದಲ್ಲಿ ಪ್ರಕರಣ ದಾಖಲು..!

August 23, 2026

Leave a Reply Cancel reply

Your email address will not be published. Required fields are marked *

Recent News

ಐಫೋನ್ EMI ವಿಚಾರಕ್ಕೆ ಮೂವರ ದುರಂತ ಅಂತ್ಯ – 2025ರಲ್ಲಿ ಅದೇ ಜಾಗದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ..!

ಐಫೋನ್ EMI ವಿಚಾರಕ್ಕೆ ಮೂವರ ದುರಂತ ಅಂತ್ಯ – 2025ರಲ್ಲಿ ಅದೇ ಜಾಗದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ..!

August 24, 2026
ಪುತ್ತೂರಲ್ಲಿ ವಂದೇ ಭಾರತ್‌ ನಿಲುಗಡೆಗೆ ಆನ್‌ಲೈನ್ ಅಭಿಯಾನ; 2,500ಕ್ಕೂ ಅಧಿಕ ಸಹಿ ಸಂಗ್ರಹ..!

ಪುತ್ತೂರಲ್ಲಿ ವಂದೇ ಭಾರತ್‌ ನಿಲುಗಡೆಗೆ ಆನ್‌ಲೈನ್ ಅಭಿಯಾನ; 2,500ಕ್ಕೂ ಅಧಿಕ ಸಹಿ ಸಂಗ್ರಹ..!

August 24, 2026
ಬೆಳ್ತಂಗಡಿ: ವಾಹನ ಡಿಕ್ಕಿ ಮೂಲಕ ಕೊಲೆಗೆ ಯತ್ನ: ಆರೋಪಿ ಬಂಧನ..!!

ಬೆಳ್ತಂಗಡಿ: ವಾಹನ ಡಿಕ್ಕಿ ಮೂಲಕ ಕೊಲೆಗೆ ಯತ್ನ: ಆರೋಪಿ ಬಂಧನ..!!

August 23, 2026
ಪುತ್ತೂರಿನಲ್ಲಿ ಅಕ್ರಮ ಜಾನುವಾರು ಸಾಗಾಟ: ಮೂರು ಜಾನುವಾರುಗಳ ರಕ್ಷಣೆ, ಆರೋಪಿ ಬಂಧನ..!

ಪುತ್ತೂರಿನಲ್ಲಿ ಅಕ್ರಮ ಜಾನುವಾರು ಸಾಗಾಟ: ಮೂರು ಜಾನುವಾರುಗಳ ರಕ್ಷಣೆ, ಆರೋಪಿ ಬಂಧನ..!

August 23, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

You cannot copy content of this page

No Result
View All Result

© 2020 Zoomin TV. All Rights Reserved. Website made with ❤️ by The Web People.