ವಿಟ್ಲ -ಉಪ್ಪಿನಂಗಡಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾಗಿ ಶ್ರೀಮತಿ ಶಕುಂತಲಾ ಕುಲಾಲ್ ಕೆದಿಲ ನೇಮಕ ಗೊಂಡಿದ್ದಾರೆ.
ಮಾಜಿ ಶಾಸಕಿ ಶಕುಂತಲಾ ಟಿ ಶೆಟ್ಟಿ ಹಾಗೂ ವಿಟ್ಲ -ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾದ ಡಾ :ರಾಜರಾಮ್ ರವರ ಶಿಫ್ಫಾರಸ್ಸಿನ ಮೇರೆಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ ಹರೀಶ್ ಕುಮಾರ್ ರವರ ಸೂಚನೆಯಂತೆ ದ ಕ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ ರವರು ವಿಟ್ಲ -ಉಪ್ಪಿನಂಗಡಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಶ್ರೀಮತಿ ಶಕುಂತಲಾ ಕುಲಾಲ್ ರವರನ್ನು ನೇಮಕ ಗೊಳಿಸಿದರು.

ಶಕುಂತಲಾ ಕುಲಾಲ್ ರವರು ಬಂಟ್ವಾಳ ತಾಲ್ಲೂಕು ಪಂಚಾಯತ್ ಮಾಜಿ ಸದಸ್ಯೆ ಯಾಗಿದ್ದು, ನವೋದಯ ಸ್ವಸಹಾಯ ಸಂಘದ ಮಾಣಿ ವಲಯ ಅಧ್ಯಕ್ಷರಾಗಿ, ಮಾಣಿ ಮಹಿಳಾ ಮಂಡಲ ಪದಾಧಿಕಾರಿಗಳಾಗಿ, ಹಲವಾರು ಸಾಮಾಜಿಕ ಸಂಘಟಣೆಯಲ್ಲಿ ತೊಡಗಿಸಿಕೊಂಡವರಾಗಿರುತ್ತಾರೆ,ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿರುವ ಇವರು ಕೆದಿಲ ಗ್ರಾಮದ ಗಡಿಯಾರ ಎಂಬಲ್ಲಿನ ನಿವಾಸಿಯಾಗಿರುತ್ತಾರೆ