ಉಪ್ಪಿನಂಗಡಿ: ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಾಲಯದ ನೇಮೋತ್ಸವದಲ್ಲಿ ದೈವ ನರ್ತನ ಸೇವೆ ನೀಡುತ್ತಿದ್ದ ತನಿಯ ಪರವ (64 ವ) ಹೃದಯಾಘಾತಕ್ಕೀಡಾಗಿ ಸೆ.5 ರಂದು ನಿಧನರಾದರು.
ವಂಶಪಾರಂಪರ್ಯವಾಗಿ ನಡೆಸಿಕೊಂಡು ಬರಲಾಗುತ್ತಿದ್ದ ಈ ಸೇವೆಯನ್ನು ತನಿಯ ರವರು ಕಳೆದ ಹಲವು ದಶಕಗಳಿಂದ ಶ್ರದ್ಧೆ ಹಾಗೂ ಭಕ್ತಿಯೊಂದಿಗೆ ನಿರ್ವಹಿಸಿಕೊಂಡು ಬರುತ್ತಿದ್ದರು.