ವಿಟ್ಲ: ದ.ಕ. ಜಿ. ಪಂ. ಹಿ. ಪ್ರಾಥಮಿಕ ಶಾಲೆ ಕೇಪುವಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ) ಕೇಪು ಒಕ್ಕೂಟದ ಸದಸ್ಯರು ಶಾಲಾ ಮೈದಾನದ ಸ್ವಚ್ಚತಾ ಕಾರ್ಯಕ್ರಮವನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷರಾದ ರಘುರಾಮ ಶೆಟ್ಟಿ, ಎಸ್.ಡಿ.ಎಮ್. ಸಿ. ಅಧ್ಯಕ್ಷರಾದ ರವಿ ಗೌಡ, ಮುಖ್ಯ ಶಿಕ್ಷಕಿ ಭಾಗೀರಥಿ, ಸೇವಾ ಪ್ರತಿನಿಧಿ ಭವಾನಿ ಮತ್ತು ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.