ಮಂಗಳೂರು: ದ.ಕ ಜಿಲ್ಲೆಯಲ್ಲಿ ಗಣೇಶೋತ್ಸವ ಆಚರಣೆ ಸಂಬಂಧ ನಿಯಾಮವಳಿ ಪ್ರಕಟಗೊಂಡಿದೆ. ಸರ್ಕಾರದ ಆದೇಶದಲ್ಲಿ ಕೆಲವು ಬದಲಾವಣೆ ಮಾಡಿ ದ.ಕ. ಜಿಲ್ಲಾಡಳಿತ ಮಾರ್ಗಸೂಚಿ ಪ್ರಕಟಿಸಿದೆ.
ದ.ಕ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಜಿಲ್ಲಾಡಳಿತ ಕೈಗೊಂಡಿರುವ ಮಾರ್ಪಾಡುಗಳೇನು..?
- ದ.ಕ ಜಿಲ್ಲೆಯಲ್ಲಿ 3 ದಿನ ಗಣೇಶೋತ್ಸವ ಆಚರಣೆಗೆ ಅವಕಾಶ.
- ದೇವಸ್ಥಾನ, ಸಮುದಾಯ ಭವನ, ಮನೆಗಳಲ್ಲಿ ಸರಳ ಆಚರಣೆಗೆ ಸೂಚನೆ.
- ಶಾಮಿಯಾನ, ಪೆಂಡಾಲ್ ಹಾಕಿ ಗಣೇಶೋತ್ಸವ ಆಚರಣೆಗೆ ಅವಕಾಶವಿಲ್ಲ.
- ಯಾವುದೇ ಮೈದಾನ ಅಥವಾ ಜನನಿಬಿಡ ಪ್ರದೇಶಗಳಲ್ಲಿ ಆಚರಣೆ ಇಲ್ಲ ಎಂದು ದ.ಕ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಅದೇಶಿಸಿದ್ದಾರೆ.