ಪುತ್ತೂರು : ಹೊಸ ವರ್ಷದ ಆಚರಣೆಯ ಅಂಗವಾಗಿ ಪುತ್ತೂರಿನ ಅಭಿರಾಮ್ ಫ್ರೆಂಡ್ಸ್ ನೇತೃತ್ವದಲ್ಲಿ ನ್ಯೂ ಇಯರ್ ಟ್ರೋಫಿ – 2021 ಕ್ರಿಕೆಟ್ ಪಂದ್ಯಾಟವು ಜ. 3ರಂದು ಜೂನಿಯರ್ ಕಾಲೇಜು ಕೊಂಬೆಟ್ಟು ಕ್ರೀಡಾಂಗಣದಲ್ಲಿ ನಡೆಯಿತು.
ಪಂದ್ಯಾವಳಿಯ ಅಂತಿಮ ಘಟ್ಟದವರೆಗೂ ಪ್ರವೇಶಿಸಿದ ಸಿಸ್ಲರ್ ತಂಡವು ಅಂತಿಮ ಹಣಾಹಣಿಯಲ್ಲೂ ರೈಡರ್ಸ್ 11 ತಂಡವನ್ನು ಮಣಿಸಿ ಗೆಲುವಿನ ನಗೆ ಬೀರಿದೆ.
ಫೈನಲ್ ಪಂದ್ಯದಲ್ಲಿ ರಿತೇಶ್ ಕುಮಾರ್ ತನ್ನ ಅಮೋಘ ಆಟದಿಂದ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನೂ ಸಿಜ್ಲರ್ ತಂಡದ ಲೋಕೇಶ್ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಕಾರ್ತಿಕ್ ಸಿಸ್ಲರ್ ಬೆಸ್ಟ್ ಬೌಲರ್ ಆಗಿ ಗುರುತಿಸಿಕೊಂಡರೆ, ಬೆಸ್ಟ್ ಬ್ಯಾಟ್ಸ್‌ಮನ್ ಆಗಿ ಸೂರಜ್ ರೈಡರ್ಸ್ – 11, ಬೆಸ್ಟ್ ವಿಕೆಟ್ ಕೀಪರ್ ಆಗಿ ಪ್ರಭಾಸ್ ಸಿಸ್ಲರ್, ಬೆಸ್ಟ್ ಕ್ಯಾಚರ್ ಆಗಿ ಸಫ್ವಾನ್ ರೈಡರ್ಸ್ – 11 ಪ್ರಶಸ್ತಿ ಪಡೆದರು.