ಫೋಟೋಗ್ರಫಿ – ಪೃಥ್ವಿ ಚಡಗಸ್ ಪಿಕ್ಸೆಲ್
: ಪಾಂಗಳಾಯಿ ಶ್ರೀ ಮುಂಡ್ಯತ್ತಾಯ ದೈವಸ್ಥಾನದಲ್ಲಿ ಜ. 3 ರಂದು ವರ್ಷಾವಧಿ ಪೂಜೆ, ನೇಮೋತ್ಸವವು ನಡೆಯಿತು. ಪ್ರಧಾನ ದೈವ ಶ್ರೀ ಆರಸು ಮುಂಡ್ಯತ್ತಾಯ ಹಾಗೂ ಪರಿವಾರ ದೈವಗಳಾದ ಪೊಟ್ಟನ್ ದೈವ, ಪಂಜುರ್ಲಿ ದೈವ, ಕಲ್ಲುರ್ಟಿ ದೈವ, ಗುಳಿಗ ದೈವಗಳ ನೇಮೋತ್ಸವ ಬಲ್ನಾಡು ಶಶಾಂಕ ನೆಲ್ಲಿತ್ತಾಯರ ಮಧ್ಯಸ್ಥಿಕೆಯಲ್ಲಿ ನಡೆಯಿತು.
ಸಂಜೆ ದೈವಗಳ ಭಂಡಾರ ತೆಗೆದ ಬಳಿಕ ಅನ್ನಸಂತರ್ಪಣೆ ನಡೆಯಿತು. ಉಪ್ಪಿನಂಗಡಿ ಕಾಂಚನ ಸುಬ್ಬಣ್ಣ ನಲಿಕೆಯವರು ಶ್ರೀ ಅರಸು ಮುಂಡ್ಯತ್ತಾಯ ದೈವ, ಪೊಟ್ಟನ್ ದೈವ, ಕಾಂಚನ್ ದಿನೇಶ್ ರವರು ಪಂಜುರ್ಲಿ ದೈವ, ಕಾಂಚನ ನವೀನ್ ರವರು ಕಲ್ಲುರ್ಟಿ ದೈವ, ಪ್ರಶಾಂತ್ ಬಳ್ಳಮಂಜರವರು ಗುಳಿಗ ದೈವದ ನರ್ತನ ಸೇವೆ ನಡೆಸಿದರು
.ಶ್ರೀ ಮುಂಡ್ಯತ್ತಾಯ ದೈವಸ್ಥಾನ ಸಮಿತಿ ಅಧ್ಯಕ್ಷ ವಿನಯ ಭಂಡಾರಿ, ಉಪಾಧ್ಯಕ್ಷ ತಾರಾನಾಥ ರೈ ವಿದ್ಯಾನಗರ ದರ್ಬೆ, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ನಾಯ್ಕ್, ಜತೆ ಕಾರ್ಯದರ್ಶಿ ಶಿವಕುಮಾರ್, ಪಿ. ಬಿ. ಕಲ್ಲಿಮಾರ್, ಖಜಾಂಚಿ ಸರೋಜಿನಿ ಎಸ್, ಅಭಿಕಾರ್, ಸಮಿತಿ ಸದಸ್ಯರಾದ ಪಿ. ಎಸ್.ರಾಜಗೋಪಾಲ ಶಗ್ರಿತ್ತಾಯ, ಸಂಪತ್ ಕುಮಾರ್ ಬಿ, ಸಂತೋಷ್ ಬೋನಂತಾಯ, ಉಮಾಶಂಕರ್ ಪಾಂಗಳಾಯಿ, ಸೂರಪ್ಪ ಗೌಡ ಎ ಪಾಂಗಳಾಯಿ, ಪ್ರಶಾಂತ್ ಪಾಂಗಳಾಯಿ, ಕರುಣಾಕರ ಆಲೆಟ್ಟಿ ಪಾಂಗಳಾಯಿ, ಸುರೇಶ್ ನಾಯ್ಕ್ ಬಾಳೆಪುಣಿ, ಜಯಶಂಕರ್ ರೈ, ಪ್ರದೀಪ್ ಆಚಾರ್ಯ, ಸಚಿನ್ ಎಂ ನಾಯಕ್, ವಾಸು ಪೂಜಾರಿ, ಚಂದ್ರಾವತಿ ಆಚಾರ್ಯ ಪಾಂಗಳಾಯಿ, ಸುರೇಶ್ ನಾಯ್ಕ್, ಕೆ. ಪಿ. ಕಲ್ಲಿಮಾರ್, ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್, ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ, ಸದಸ್ಯರಾದ ಪಿ. ಜಿ. ಜಗನ್ನಿವಾಸರಾವ್, ದೀಕ್ಷಾ ಪೈ, ಗೌರಿ ಬನ್ನೂರು, ಸುಧೀಂದ್ರ ಪ್ರಭು, ನಗರಸಭಾ ಮಾಜಿ ಉಪಾಧ್ಯಕ್ಷ ವಿಶ್ವನಾಥ ಗೌಡ, ತಾಲೂಕು ಪಂಚಾಯತ್ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಉದ್ಯಮಿ ಅಚ್ಯುತ ನಾಯಕ್, ಮುಳಿಯ ಜ್ಯುವೆಲ್ಲರ್ಸ್ ಮಾಲಕ ಕೇಶವ ಪ್ರಸಾದ್ ಮುಳಿಯ, ಸಿದ್ಧನಾಥ ಖಂದಾರೆ, ಶ್ರೀ ಲಕ್ಷ್ಮೀ ಜ್ಯುವೆಲ್ಲರ್ಸ್ ನ ಭಾಸ್ಕರ ಆಚಾರ್ಯ, ಸಂತೋಷ್ ಆಚಾರ್ಯ, ವರದರಾಜ್ ಬಜಾರ್ ನ ವೆಂಕಟರಮಣ ನಾಯಕ್, ಸುಗಮ ಸ್ಟೋರ್ ಮಾಲಕ ಬಿ ಗೋಪಾಲಕೃಷ್ಣ ಭಟ್, ಶ್ರೀನಿವಾಸ್ ಶೆಣೈ, ಗುರುಪ್ರಸಾದ್ ಶೆಣೈ, ಪರ್ಲಡ್ಕ ಶ್ರೀ ದುರ್ಗಾ ಕ್ಲಿನಿಕ್ ನ ಡಾ. ಹರಿಕೃಷ್ಣ ಪಾಣಾಜೆ, ಸಮಿತಿ ಮಾಜಿ ಅಧ್ಯಕ್ಷ ಸಿ. ಮಹಾದೇವ ಶಾಸ್ತ್ರಿ, ಗೋಪಾಲಕೃಷ್ಣ ನಾಯ್ಕ ಕಲಿಮಾರ್, ವೀಕ್ಷಿತ್ ಎಸ್ ನಾಯ್ಕ್ ಕಲಿಮಾರ್, ಹರೀಶ್ ಕಲ್ಲಾರೆ, ಶ್ರೀನಿವಾಸ್ ಭಂಡಾರ್ಕರ್, ರಮೇಶ್ ಆಚಾರ್ಯ, ಎಸ್ ಎಮ್ ಮುತ್ತುಸ್ವಾಮಿ, ರತ್ನಾವತಿ ಆನಂದ ಆಚಾರ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.