ಬೆಂಗಳೂರು: ಕೊರೊನಾ ಮೂರನೇ ಅಲೆ ಬೆನ್ನಲ್ಲೇ ನಿಫಾ ವೈರಸ್ ಭೀತಿಯೂ ಎದುರಾಗಿದೆ. ಆದರೆ ಇದೀಗ ಮತ್ತೊಂದು ರೂಪಾಂತರಿಯ ಕಾಟ ರಾಜ್ಯದಲ್ಲಿ ಭಯ ಹುಟ್ಟಿಸುತ್ತಿದೆ. ಡೆಲ್ಟಾ ವೈರಸ್ ರೂಪಾಂತರಿ ಇದೀಗ ಬೆಂಗಳೂರಿನಲ್ಲಿ ಪತ್ತೆಯಾಗಿದ್ದು, ಮತ್ತೆ ಸಿಲಿಕಾನ್ ಸಿಟಿಗೆ ಆತಂಕ ಎದುರಾಗಿದೆ.
ರಾಜ್ಯದಲ್ಲಿ ಇನ್ನೇನು ಕೊರೊನಾ ಮುಗಿದೇ ಹೋಯ್ತು ಅಂತ ಮಂದಹಾಸ ಬೀರಿದ್ದ ಜನರಿಗೆ ಮತ್ತೆ ಆತಂಕ ಶುರುವಾಗಿದೆ. ರೂಪಗಳ ಮೇಲೆ ರೂಪ ತಾಳಿ ಜನರನ್ನ ಚಿತ್ರ ವಿಚಿತ್ರವಾಗಿ ಹಿಂಸಿಸಲು.. ಪ್ರಾಣ ಹೀರಲು ವೈರಸ್ಗಳು ಹುಟ್ಟಿಕೊಳ್ತಾನೇ ಇದೆ.
ನಿತ್ಯ ರಾಜ್ಯದಲ್ಲಿ 900ರಿಂದ ಸಾವಿರದ ವರೆಗೂ ಕೊರೊನಾ ಕೇಸ್ಗಳು ಪತ್ತೆಯಾಗ್ತಿವೆ. ಇದರ ಬೆನ್ನಲ್ಲೇ ಈಗ ಡೆಲ್ಟಾ ರೂಪಾಂತರಿಯ ಸಬ್ ರೂಪಾಂತರಿ ಪತ್ತೆಯಾಗಿದೆ.
ಈ ವೈರಸ್ ಸೈಲೆಂಟಾ..? ವೈಲೆಂಟಾ ಅಂತ ನೋಡೋದಾದ್ರೆ.. ಸಾರ್ಸ್ಕೋವ್- 2 ಡೆಲ್ಟಾ ರೂಪಾಂತರಿಗಳು ಪತ್ತೆಯಾಗಿದ್ದು, 2 ಉಪ-ವಂಶಾವಳಿಗಳಾದ AY.2 ಮತ್ತು AY.12 ವೈರಸ್ಗಳು ನಗರದ ಹಲವರಲ್ಲಿ ಪತ್ತೆಯಾಗಿದೆ. ಈ ವೈರಸ್ನಿಂದ ತೀರಾ ಪರಿಣಾಮಕಾರಿಯಾಗಲ್ಲ, ಜನರು ಭಯ ಭೀತರಾಗೋ ಅವಶ್ಯಕತೆ ಇಲ್ಲ ಅಂತ ಹೇಳಲಾಗ್ತಿದೆ. ಸೋಂಕಿತರಲ್ಲಿ ಒಂದಿಷ್ಟು ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದ್ರೆ ಅದೃಷ್ಟವಶಾತ್ ಯಾವುದೇ ಸಾವು ಸಂಭವಿಸಿಲ್ಲ. ಹಾಗೂ ಸೋಂಕು ವೇಗವಾಗಿ ಹಡುತ್ತದೆ ಅನ್ನೋದಕ್ಕೆ ಪುರಾವೆ ಇಲ್ಲ. ಆದ್ರೆ ವೈರಸ್ ಹೆಚ್ಚಾದರೆ ಕ್ಲಸ್ಟರ್ ಮಟ್ಟದಲ್ಲಿ ಹರಡುವ ಸಾಧ್ಯತೆ ಇದೆ ಎನ್ನಲಾಗ್ತಿದೆ.