ಪುತ್ತೂರು: ಪಾಣಾಜೆ ಗ್ರಾಮ ಪಂಚಾಯತಿನ ಕಾಂಗ್ರೆಸ್ ಸದಸ್ಯೆ ವಿಮಲಾ ನಾಯ್ಕ್ ರವರ ಪತಿ ಮಹಾಲಿಂಗ ನಾಯ್ಕ್ ರವರು ಕೆಲವು ದಿನಗಳ ಹಿಂದೆ ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದು, ಪಾಣಾಜೆ ಗ್ರಾಮದ ಅರ್ಧ ಮೂಲೆ ಯಲ್ಲಿರುವ ಅವರ ಮನೆಗೆ ಮಾಜಿ ಶಾಸಕಿ ಶಕುಂತಲಾ ಟಿ ಶೆಟ್ಟಿ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ ರೈ ಯವರು ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
ಈ ಸಂದರ್ಭದಲ್ಲಿ ದ ಕ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವಿಭಾಗದ ಜಿಲ್ಲಾ ಪ್ರದಾನ ಕಾರ್ಯದರ್ಶಿ ನಾರಾಯಣ ನಾಯ್ಕ್ ಆರ್ಲ ಪದವು, ಬ್ಲಾಕ್ ಎಸ್ ಟಿ ಘಟಕದ ಅಧ್ಯಕ್ಷ ಮಹಾಲಿಂಗ ನಾಯ್ಕ್ ನೆರಿಮೊಗರು, ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಶಾರದಾ ಅರಸ್, ಮಾಜಿ ಅಧ್ಯಕ್ಷೆ ವಿಶಾಲಾಕ್ಷಿ ಬನ್ನೂರು, ಉಪಾಧ್ಯಕ್ಷೆ ಶ್ರೀಮತಿ ಸನಮ್ ನಝೀರ್,ಸ್ಥಳೀಯ ಕಾಂಗ್ರೆಸ್ ನಾಯಕಿ ಶ್ರೀಮತಿ ಸೀತಾ ಭಟ್, ಕಾಂಗ್ರೆಸ್ ಮುಖಂಡ ಜಗಜೀವನ್ ರೈ (ಪುಟ್ಟಣ್ಣ ),ಬ್ಲಾಕ್ ಕೋವಿಡ್ ಸೇವಕ್ ಸಿಮ್ರಾನ್ ನಝೀರ್ ಉಪಸ್ಥಿತರಿದ್ದರು.