ಬಂಟ್ವಾಳ: ಹಿಂದು ಜಾಗರಣ ವೇದಿಕೆ ಬಂಟ್ವಾಳ ತಾಲೂಕು ಪೊಳಲಿ ವಲಯ ಇದರ ವತಿಯಿಂದ ಬಡಗಬೆಳ್ಳೂರು ಘಟಕದ ಪುನರ್ ರಚನೆ ಮತ್ತು ಕೊಳತ್ತಮಜಲು, ವಾರಟೀಲು,ಬಟ್ಟಾಜೆ ನೂತನ ಮೂರು ಘಟಕಗಳ ಉದ್ಘಾಟನೆ ಕಾರ್ಯಕ್ರಮವೂ ಬಡಗಬೆಳ್ಳೂರು ಆದಿಶಕ್ತಿ ದೇವಸ್ಥಾನ ವಠಾರದಲ್ಲಿ ನಡೆಯಿತು.
ವೇದಿಕೆಯಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಪ್ರಕಾಶ್ ಅಳ್ವ ಬಡಗಬೆಳ್ಳೂರು, ಮತ್ತು ಪ್ರಾಂತ ಕಾರ್ಯಕಾರಣಿ ಸದಸ್ಯ ರಾಧಾಕೃಷ್ಣ ಅಡ್ಯಂತಾಯ, ಮಂಗಳೂರು ವಿಭಾಗ ಸಂಪರ್ಕ ಪ್ರಮುಖ್ ರತ್ನಾಕರ ಶೆಟ್ಟಿ ಕಲ್ಲಡ್ಕ, ಪುತ್ತೂರು ಜಿಲ್ಲಾಧ್ಯಕ್ಷ ಜಗದೀಶ್ ನೆತ್ತರಕೆರೆ, ತಾಲೂಕು ಅಧ್ಯಕ್ಷ ತಿರುಲೇಶ್, ವಲಯ ಅಧ್ಯಕ್ಷ ಉಮೇಶ್ ಬೆಂಜನಪದವು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪುತ್ತೂರು ಜಿಲ್ಲಾ ಪ್ರಮುಖರು,ಮತ್ತು ಮಂಗಳೂರು ಜಿಲ್ಲಾ ಪ್ರಮುಖರು, ಬಂಟ್ವಾಳ ತಾಲೂಕು ಪ್ರಮುಖರು ಪೂಳಲಿ ವಲಯದ ಪ್ರಮುಖರು ಮತ್ತು ಕಾರ್ಯಕರ್ತರು, ಪರಿವಾರ ಸಂಘಟನೆಯ ಪ್ರಮುಖರು ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮೂರು ಘಟಕದ ನೂತನ ಜವಾಬ್ದಾರಿಯನ್ನು ಪೊಳಲಿ ವಲಯದ ಪ್ರಧಾನ ಕಾರ್ಯದರ್ಶಿ ಪುಷ್ಪರಾಜ್ ಕಮ್ಮಾಜೆ ಘೋಷಣೆ ಮಾಡಿದರು. ಗಣೇಶ್ ವರಕೋಡಿ ಸ್ವಾಗತಿಸಿದರು. ಎಂ.ಕೆ.ಕನ್ಯಾಡಿ ಕಾರ್ಯಕ್ರಮ ನಿರೂಪಣೆ ಮಾಡಿದರು. ದೀಕ್ಷಿತ್ ಭಟ್ಟಾಜೆ ವೈಯಕ್ತಿಕ ಗೀತೆ ಹಾಡಿದರು. ಉದಯ ವಾರಟೀಲು ಧನ್ಯವಾದ ಗೈದರು.