ಪುತ್ತೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಕಾರ್ಯಕರ್ತ, ಸಿಂಡಿಕೇಟ್ ಬ್ಯಾಂಕ್ ನ ನಿವೃತ್ತ ಉದ್ಯೋಗಿ, ಚಂದ್ರಶೇಖರ ನಾಯಕ್ ಅಮೈ (72) ಸೆ.12 ರಂದು ನಿಧನರಾದರು.
ಕಳೆದ ಮೂರು ನಾಲ್ಕು ದಿನಗಳಿಂದ ಅಲ್ಪ ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದ ಚಂದ್ರಶೇಖರ್ ರವರು ಇಂದು ಸಂಜೆ ಕೊನೆಯುಸಿರೆಳೆದರು.
ಮೂಲತಃ ವಿಟ್ಲದ ಕೇಪು ಗ್ರಾಮದ ಅಮೈಯವರಾದ ಚಂದ್ರ ಶೇಖರ್ ಅಮೈ ಸಂಘದ ಅತ್ಯಂತ ಹಿರಿಯ ಕಾರ್ಯಕರ್ತ. ಪುತ್ತೂರಿನ ಸಂಘದಲ್ಲಿ ಚಂದ್ರಣ್ಣ ಎಂದೇ ಚಿರಪರಿಚಿತರು. ತಮ್ಮ ಬಾಲ್ಯದಿಂದಲೇ ಆರ್.ಎಸ್.ಎಸ್ ಕಾರ್ಯಕರ್ತರಾಗಿ ಸಂಘ ಸೇವೆ ಮಾಡಿಕೊಂಡು ಬಂದಿದ್ದರು.
ಸಿಂಡಿಕೇಟ್ ಬ್ಯಾಂಕ್ ಉದ್ಯೋಗಿಯಾಗಿದ್ದ ಚಂದ್ರಣ್ಣನವರು ವೃತ್ತಿಯ ನಿಮಿತ್ತ ಹಲವಾರು ಊರಿಗಳಿಗೆ ಹೋದಾಗಲೂ ಹೋದಲ್ಲೆಲ್ಲಾ ಸಂಘದ ಶಾಖೆ ಆರಂಭಿಸಿದ್ದರು. ಬಳ್ಳಾರಿ, ಬಾಗಲಕೋಟೆ ಮುಂತಾದ ಕಡೆಗಳಲ್ಲಿ ತಮ್ಮ ಇರುವಿಕೆಯ ಕಾಲದಲ್ಲಿ ಸಂಘದ ಶಾಖೆ ಆರಂಭಿಸಿದ್ದರು. ಬಳಿಕ ಪುತ್ತೂರಿಗೆ ಬಂದು ಪುತ್ತೂರು ನಗರದ ಸಿಂಡಿಕೇಟ್ ಬ್ಯಾಂಕ್ ಮುಖ್ಯ ಕಚೇರಿಯಲ್ಲಿ ಕಾರ್ಯ ನಿರ್ವಹಿಸುವ ಸಂದರ್ಭ ಪುತ್ತೂರಿನಲ್ಲಿ ಸಂಘದ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ಮೃತರು ಪತ್ನಿ , ಪುತ್ರ ಬೆಂಗಳೂರಿನಲ್ಲಿ ಇಂಜಿನಿಯರ್ ಉದ್ಯೋಗಿಯಾಗಿರುವ ಪ್ರಶಾಂತ್ ಅಮೈ, ಪುತ್ರಿ ಅಪೂರ್ವ, ಸೊಸೆ ಶ್ವೇತಾ ನಾಯಕ್, ಅಳಿಯ ರವಿರಾಜ್ ಕಾಮತ್, ಮೊಮ್ಮಕ್ಕಳು ಮತ್ತು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಮೃತರ ಕಾರ್ಯಗಳು ಮೂಲ ಮನೆ ಅಮೈಯಲ್ಲಿ ನಡೆಯಲಿದೆ ಎಂದು ತಿಳಿದು ಬಂದಿದೆ.