ದೇವರಕೊಲ್ಲಿ ಬಳಿ 3 ಕಾರುಗಳ ಸರಣಿ ಅಪಘಾತ ಉಂಟಾಗಿ ಕಾರುಗಳು ಜಖಂಗೊಂಡಿರುವ ಘಟನೆ ಮೇ 17ರಂದು ಮಧ್ಯಾಹ್ನ ಸಂಭವಿಸಿದೆ.
ಸುಳ್ಯ ಕಡೆಯಿಂದ ಮಡಿಕೇರಿಯತ್ತ ಹೋಗುತ್ತಿದ್ದ ಕಾರಿಗೆ ಮಡಿಕೇರಿಯಿಂದ ಸುಳ್ಯ ಕಡೆ ಬರುತ್ತಿದ್ದ ಕಾರು ಡಿಕ್ಕಿ ಹೊಡೆದಿದ್ದು, ಈ ಸಂದರ್ಭದಲ್ಲಿ ಚಾಲಕ ಬ್ರೇಕ್ ಹಾಕಿದಾಗ ಅದರ ಇಂದಿನಿಂದ ಬರುತ್ತಿದ್ದ ಮತ್ತೊಂದು ಕಾರು ಈ ಕಾರಿಗೆ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.
ಘಟನೆಯಲ್ಲಿ ಮೂರೂ ಕಾರುಗಳು ಜಖಂಗೊಂಡಿದ್ದು ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.


























