ಕಕ್ಕಿಂಜೆ: ಮಾರುತಿ ಸುಜುಕಿ ವಾಹನಗಳ ಅಧಿಕೃತ ಮಾರಾಟಗಾರ ಸಂಸ್ಥೆಯಾದ ಮಂಡೋವಿ ಮೋಟಾರ್ಸ್ ಪ್ರೈವೇಟ್ ಲಿಮಿಟೆಡ್ ತನ್ನ ಗ್ರಾಹಕ ಸೇವೆಯನ್ನು ಮತ್ತಷ್ಟು ವಿಸ್ತರಿಸುವ ಉದ್ದೇಶದಿಂದ ಕಕ್ಕಿಂಜೆ–ಚಾರ್ಮಾಡಿ ರಸ್ತೆಯ ಅಲ್ಮಫಾಸ್ ಕಾಂಪ್ಲೆಕ್ಸ್‌ನಲ್ಲಿ ಹೊಸ ಮಾರುತಿ ಸುಜುಕಿ ಅರೆನಾ ಸ್ಯಾಟಲೈಟ್ ಶಾಖೆಯನ್ನು ಆರಂಭಿಸುತ್ತಿದೆ. ಶಾಖೆಯ ಉದ್ಘಾಟನಾ ಸಮಾರಂಭವು ಜುಲೈ 4ರಂದು ಬೆಳಿಗ್ಗೆ 10.45ಕ್ಕೆ ನಡೆಯಲಿದ್ದು, ಸ್ಥಳೀಯ ಗಣ್ಯರು ಹಾಗೂ ಸಂಸ್ಥೆಯ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಹೊಸ ಶಾಖೆಯಲ್ಲಿ ಹೊಸ ಮಾರುತಿ ಸುಜುಕಿ ಕಾರುಗಳ ಮಾರಾಟ, ವಿವಿಧ ಮಾದರಿಗಳ ಕುರಿತು ಮಾಹಿತಿ, ಟ್ರೂ ವ್ಯಾಲ್ಯೂ ಎಕ್ಸ್‌ಚೇಂಜ್ ಸೌಲಭ್ಯ, ಹಳೆಯ ಕಾರುಗಳ ಖರೀದಿ–ಮಾರಾಟಕ್ಕೆ ಸಂಬಂಧಿಸಿದ ಮಾರ್ಗದರ್ಶನ ಸೇರಿದಂತೆ ವಿವಿಧ ಸೇವೆಗಳು ಒಂದೇ ಸೂರಿನಡಿ ದೊರೆಯಲಿವೆ.
ಹೆಚ್ಚಿನ ಮಾಹಿತಿಗಾಗಿ ಚರಣ್ ಕುಮಾರ್ ಅವರನ್ನು 9972460032 ಸಂಖ್ಯೆಯಲ್ಲಿ ಸಂಪರ್ಕಿಸಬಹುದು ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.


























