ಕೊಕ್ಕಡ: ಪಟ್ರಮೆ ಗ್ರಾಮದ ಪೆರ್ಮುಡದಲ್ಲಿ ಮಹಿಳೆಯೊಬ್ಬರು ಮನೆ ಸಮೀಪ ಆತ್ಮಹತ್ಯೆ ಮಾಡಿಕೊಂಡ ಘಟನೆ ನ.18ರಂದು ನಡೆದಿದೆ.
ಮೃತರನ್ನು ಮೂಲತಃ ಕೌಕ್ರಾಡಿ ಗ್ರಾಮದವರಾಗಿದ್ದು, ಪ್ರಸ್ತುತ ಪೆರ್ಮುಡದಲ್ಲಿ ವಾಸವಾಗಿದ್ದ ಗೀತಾ (42) ಎಂದು ಗುರುತಿಸಲಾಗಿದೆ. ಮೃತರು ಐವರು ಪುತ್ರರನ್ನು ಅಗಲಿದ್ದಾರೆ.
ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕೆ ಧರ್ಮಸ್ಥಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

























