ಬೆಳ್ತಂಗಡಿ: ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಬ್ಯಾಂಕ್ನ ಬೆಳ್ತಂಗಡಿ ಶಾಖೆಯಲ್ಲಿ ಪಿಗ್ಗಿ ಸಂಗ್ರಹಕಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪುನೀತ್ ಅಲಿಯಾಸ್ ಪುರುಷೋತ್ತಮ್ ಗೌಡ ಬಾಳೆಹಿತ್ತಿಲು (ಅವಿವಾಹಿತ) ಅವರು ಆತ್ಮಹತ್ಯೆ ಮಾಡಿಕೊಂಡ ಘಟನೆ ನ.11ರ ರಾತ್ರಿ ನಡೆದಿದೆ.
ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಕೆಲಸಕ್ಕೆ ರಜೆ ಹಾಕಿದ್ದ ಪುನೀತ್, ದಿನವಿಡೀ ಸಂಬಂಧಿಕರು ಹಾಗೂ ಸಹೋದರರೊಂದಿಗೆ ಸಂತೋಷದಿಂದ ಕಾಲ ಕಳೆದಿದ್ದರು ಎನ್ನಲಾಗಿದೆ. ರಾತ್ರಿ ಸುಮಾರು 9.30ರ ವೇಳೆಗೆ ಮನೆಯ ಸಮೀಪದ ತೋಟದಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅವರ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಮೃತರು ತಂದೆ ಸೇಸಪ್ಪ ಗೌಡ, ತಾಯಿ ವನಜಾ, ಸಹೋದರ ಶೇಖರ್ ಹಾಗೂ ಸಹೋದರಿ ದಿವ್ಯ ಅವರನ್ನು ಅಗಲಿದ್ದಾರೆ.
ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


























