ಪುತ್ತೂರು: ರಾಜ್ಯದ ವಿವಿಧ ನಿಗಮ, ಮಂಡಳಿ ಹಾಗೂ ಪ್ರಾಧಿಕಾರಗಳಿಗೆ 428 ಮಂದಿಯನ್ನು ನಿರ್ದೇಶಕರು ಮತ್ತು ಸದಸ್ಯರನ್ನಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ನ.11ರಂದು ರಾತ್ರಿ ಅಧಿಕೃತ ಆದೇಶ ಹೊರಡಿಸಿದೆ. ಈ ಪಟ್ಟಿಯಲ್ಲಿ ಪುತ್ತೂರು, ಕಡಬ, ಬೆಳ್ತಂಗಡಿ, ಬಂಟ್ವಾಳ ಸಹಿತ ದ.ಕ.ಜಿಲ್ಲೆಯ ಹಲವರಿಗೆ ಸ್ಥಾನ ದೊರೆತಿದೆ.
ಕರ್ನಾಟಕ ಕೃಷಿ ಮಾರಾಟ ಮಂಡಳಿ (ಮಾರ್ಕೆಟಿಂಗ್
ಬೋರ್ಡ್) ಮಂಡಳಿಯ ನಿರ್ದೇಶಕರಾಗಿ ಪಾಣಾಜೆಯ ಶ್ರೀಪ್ರಸಾದ್ ನೇಮಕಗೊಂಡಿದ್ದಾರೆ. ಈ ಹಿಂದೆ ಪುತ್ತೂರು ಬ್ಲಾಕ್ ಯುವ ಕಾಂಗ್ರೆಸ್ ಚುನಾಯಿತ ಅಧ್ಯಕ್ಷರಾಗಿ, ರಾಜ್ಯ ಯುವಕಾಂಗ್ರೆಸ್ ವಕ್ತಾರರಾಗಿ, ಚಿಕ್ಕಮಗಳೂರು ಯುವ ಕಾಂಗ್ರೆಸ್ ಉಸ್ತುವಾರಿಯಾಗಿ ಸೇವೆ ಸಲ್ಲಿಸಿರುವ ಇವರು ರಾಜ್ಯ ಯುವ ಕಾಂಗ್ರೆಸ್ ಚುನಾಯಿತ ಕಾರ್ಯದರ್ಶಿಯಾಗಿ ಪ್ರಸ್ತುತ ಸೇವೆ ಸಲ್ಲಿಸುತ್ತಿದ್ದಾರೆ. ಎಂಟು ವರ್ಷ ಖಾಸಗಿ ಶಾಲಾ ಶಿಕ್ಷಕರಾಗಿದ್ದ ಇವರು ಉತ್ತಮ ಸಂಘಟಕರಾಗಿ ಮತ್ತು ಭಾಷಣಗಾರರಾಗಿ ಗುರುತಿಸಿಕೊಂಡಿದ್ದಾರೆ.


























