ಪುತ್ತೂರು: ಮುಸ್ಲಿಂ ಸಮಾಜದ ಸಮುದಾಯಿಕ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ 2.88 ಎಕರೆ ನಿವೇಶನವನ್ನು ಶಾಸಕ ಅಶೋಕ್ ರೈ ಅವರು ಮಂಜೂರುಗೊಳಿಸಿದ್ದಾರೆ.
ಈ ಸಂಬಂಧ ಮಂಜೂರಾತಿ ಪತ್ರವನ್ನು ಸಮಾಜದ ಹಿರಿಯರಿಗೆ ಶಾಸಕರು ಹಸ್ತಾಂತರಿಸಿದರು. ಸಮುದಾಯದ ಅಭಿವೃದ್ಧಿ, ಸಂಘಟನಾತ್ಮಕ ಚಟುವಟಿಕೆಗಳು ಹಾಗೂ ಭವಿಷ್ಯದ ಯೋಜನೆಗಳಿಗೆ ಈ ನಿವೇಶನ ಸಹಕಾರಿಯಾಗಲಿದೆ ಎಂದು ತಿಳಿದುಬಂದಿದೆ.

























