ಬಂಟ್ವಾಳ: ಮಾಣಿ- ಲಕ್ಕಪ್ಪಕೋಡಿ ಅರ್ಬಿ ರಸ್ತೆಯಲ್ಲಿ ಜನರು ನಡೆದಾಡಲು ಸಾದ್ಯವಿಲ್ಲದಷ್ಟು ಹದೆಗೆಟ್ಟಿದೆ. ಈ ಸಮಯದಲ್ಲಿ ಜನಪ್ರತಿನಿಧಿಗಳು ಯಾವುದೇ ರೀತಿಯಲ್ಲೂ ಸ್ಪಂದಿಸಿಲ್ಲ. ಎಷ್ಟೋ ಬಾರಿ ಮನವಿ ಸಲ್ಲಿಸಿದರು ಇತ್ತ ತಲೆಯೂ ಹಾಕದ ಇಂತ ಜನಪ್ರತಿನಿಧಿಗಳಿಂದ ಜನತೆ ಏನನ್ನು ನಿರೀಕ್ಷಿಸಬಹುದು ಎಂದು ಇವರ ವರ್ತನೆಗೆ ಆ ಪರಿಸರದ ಜನತೆ ಹಿಡಿ ಶಾಪ ಹಾಕುತ್ತಿದ್ದಾರೆ.

ವೃದ್ದ ಮಹಿಳೆಯೊಬ್ಬರ ಕಾಲು ಕೆಸರಲ್ಲಿ ಹೂತುಬಿದ್ದುದನ್ನು ನೋಡಿ ಮನನೊಂದು ಸ್ಥಳೀಯ ನಿವಾಸಿಗಳೇ ಸ್ವಯಂ ಪ್ರೇರಿತರಾಗಿ ಕೆಸರು ತೆಗೆದು ಬಾಳೆ ಗಿಡ ನಟ್ಟು ಆಕ್ರೋಶ ವ್ಯಕ್ತಪಡಿಸಿದರು. ವಾಹನಗಳ ಸಂಚಾರಕ್ಕೆ ತೊಡಕಾದ್ದ ಕೆಸರು ತೆಗೆದು ಶಾಂತಿಯುತವಾಗಿ ಪ್ರತಿಭಟಿಸಿದರು. ಮಾತ್ರವಲ್ಲದೆ ಇನ್ನು ಮುಂದೆ ನಮ್ಮ ಅಹವಾಲಿಗೆ ಸ್ಪಂದಿಸದ ಮಾಣಿ ಗ್ರಾಮ ಪಂಚಾಯತ್ ಗೆ ಈ ರಸ್ತೆ ಕುರಿತು ಯಾವುದೇ ದೂರು ನೀಡುವುದಿಲ್ಲ ಎಂದಿದ್ದಾರೆ. ಬಂಟ್ವಾಳ ಶಾಸಕರಲ್ಲಿ ರಸ್ತೆ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸುವಂತೆ ಸ್ಥಳೀಯ ನಿವಾಸಿಗಳು ಮನವಿ ಮಾಡಿದ್ದಾರೆ.
ಸ್ಮಶಾನದ ದುರಸ್ಥಿಯ ಸಮಯದಲ್ಲಿ ಮತ್ತು ಸ್ಥಳೀಯ ಪಂಚಾಯತ್ ಸದಸ್ಯರು ರಾಜಕೀಯ ಲಾಭಕ್ಕಾಗಿ ಅವರೇ ಹುಟ್ಟುಹಾಕಿದ ಸಮಸ್ಯೆಗಳನ್ನು ಪರಿಹರಿಸಲಾಗದ ಜನ ಪ್ರತಿನಿಧಿಗಳ ದುರ್ವತನೆಗೆ ಗ್ರಾಮಸ್ಥರಿಂದ ಧಿಕ್ಕಾರ, ರಾಜಕಾರಣ ಎಂದರೆ ಅಂದದ ಬಟ್ಟೆ ಹಾಕಿ ಊರು ಸುತ್ತುದಲ್ಲ, ಊರನ್ನು ಅಂದಾಗಾಣಿಸುದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
