ಪುತ್ತೂರು: ಮಳೆಯಿಂದಾಗಿ ತಡೆಗೋಡೆ ಕುಸಿದು ಸಂಪೂರ್ಣವಾಗಿ ಹಾನಿಗೊಂಡು ಸಂಕಷ್ಟಗೊಳಗಾಗಿರುವ ಚಿಮುಣಿಗುಡ್ಡೆ ಮನೆಯವರಿಗೆ ಹಿಂದೂ ಜಾಗರಣ ವೇದಿಕೆ ಈಶ್ವರಮಂಗಲ ಘಟಕದ ವತಿಯಿಂದ ಸಂಗ್ರಹಿಸಿದ ಮೊತ್ತ ಮತ್ತು ಅಗತ್ಯ ದಿನಬಳಕೆಯ ಸಾಮಾಗ್ರಿಗಳನ್ನು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಗೌರವಾಧ್ಯಕ್ಷರಾದ ಶ್ರೀಕೃಷ್ಣಭಟ್ ಮುಂಡ್ಯ, ಹಿಂಜಾವೇ ಮಂಗಳೂರು ವಿಭಾಗ ಕಾರ್ಯದರ್ಶಿ ಚಿನ್ಮಯ್ ಈಶ್ವರಮಂಗಲ, ಪುತ್ತೂರು ಜಿಲ್ಲಾ ಮಾತೃ ಸುರಕ್ಷಾ ಸಂಯೋಜಕ ರಾಜೇಶ್ ಪಂಚೋಡಿ, ಈಶ್ವರಮಂಗಲ ಘಟಕದ ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ಮಜಲು, ಈಶ್ವರಮಂಗಲ ಘಟಕದ ಅಧ್ಯಕ್ಷರು ಯೋಗೀಶ್ ಬಸಿರಡ್ಕ, ಮುಂತಾದವರು ಉಪಸ್ಥಿತರಿದ್ದರು.



