ಪುತ್ತೂರು ಮಾಜಿ ಶಾಸಕರಾದ ಶ್ರೀಮತಿ ಶಕುಂತಲಾ ಟಿ ಶೆಟ್ಟಿ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ ಬಿ ವಿಶ್ವನಾಥ ರೈ ಯವರ ಕೋರಿಕೆಯಂತೆ ರಾಜ್ಯ ಯಂಗ್ ಬ್ರಿಗೇಡ್ ಸೇವಾದಳದ ಅಧ್ಯಕ್ಷ ಜುನೈದ್ ಪಿಕೆ ರವರ ಶಿಫ್ಫಾರಸಿನ ಮೇರೆಗೆ, ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ರವರ ಸೂಚನೆಯಂತೆ ಈ ನೇಮಕಾತಿ ನಡೆದಿದೆ ಎಂದು ತಿಳಿದು ಬಂದಿದೆ.
ಸದಾ ಹಸನ್ಮುಖಿಯಾಗಿರುವ ರಿಯಾಜ್ ಪರ್ಲಡ್ಕ ರವರು ನಗರ ಸಭೆಯ ಕ್ರಿಯಾ ಶೀಲ ಸದಸ್ಯರಾಗಿದ್ದು, ಪುತ್ತೂರು ಯಂಗ್ ಬ್ರಿಗೇಡ್ ನ ಮುಖ್ಯ ಶಕ್ತಿಯಾಗಿರುತ್ತಾರೆ,ಯಂಗ್ ಬ್ರಿಗೇಡ್ ವತಿಯಿಂದ ಕೋರೋನ ರೋಗಿಗಳಿಗಾಗಿ ಉಚಿತ ಆಂಬುಲೆನ್ಸ್ ಸೇವೆ ಒದಗಿಸುವ ಕಾರ್ಯಕ್ರಮದ ಮುಖ್ಯ ರೂವಾರಿಯಾಗಿರುವ ರಿಯಾಜ್ ರವರು ಹಲವಾರು ಸಮಾಜ ಮುಖಿ ಕಾರ್ಯ ಕ್ರಮದಲ್ಲಿ ತನ್ನನ್ನು ತೊಡಗಿಸಿ ಕೊಂಡವರಾಗಿರುತ್ತಾರೆ.
ಮಾಜಿ ಪುರಸಭಾ ಸದಸ್ಯ ದಿವಂಗತ ಅಬ್ದುಲ್ ಹಮೀದ್ ರವರ ಸುಪುತ್ರರಾಗಿರುವ ರಿಯಾಜ್ ರವರು M. Tech ಪದವೀಧರರಾಗಿದ್ದು ಸಿವಿಲ್ ಕಾಂಟ್ರಾಕ್ಟ್ ವೃತ್ತಿ ಮಾಡುತ್ತಿದ್ದಾರೆ.