ಪುತ್ತೂರು: ಕುರಿಯ ವಲಯ ಕಾಂಗ್ರೆಸ್ ವತಿಯಿಂದ ಕುರಿಯ ಒಂದನೇ ವಾರ್ಡಿನ ಕಾಂಗ್ರೆಸ್ ಕಾರ್ಯಕರ್ತರ ಸಭೆಯು ಗ್ರಾಮ ಪಂಚಾಯತ್ ಉಸ್ತುವಾರಿ ಹಾಗೂ ಉದ್ಯಮಿಯಾಗಿರುವ ಶಿವರಾಮ ಆಳ್ವ ಹಾಗೂ ವಲಯ ಕಾಂಗ್ರೆಸ್ ಅಧ್ಯಕ್ಷ ಸನತ್ ರೈ ಏಲ್ನಾಡ್ ಗುತ್ತು ಇವರ ನೇತೃತ್ವದಲ್ಲಿ ನಡೆಯಿತು.
ಕರಜ ಗೋಪಾಲ ಗೌಡ ರ ಮನೆಯಲ್ಲಿ ನಡೆದ ಸಭೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಶಿವರಾಮ ಆಳ್ವ ರವರು, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಅವರ ತಂಡ ಇವತ್ತು ಬೂತ್ ಬೂತ್ ಗಳಲ್ಲಿ ಪಕ್ಷವನ್ನು ಬಲಪಡಿಸುವ ಕೆಲಸ ಮಾಡುತ್ತಿದ್ದಾರೆ ಅದರಂತೆ ಕಾಂಗ್ರೆಸ್ ಕಾರ್ಯಕರ್ತರು ಪಕ್ಷವನ್ನು ತಳಮಟ್ಟದಲ್ಲಿ ಸಂಘಟಿಸುವ ಕೆಲಸ ಮಾಡಬೇಕು ಹಾಗೂ ಸ್ಥಳೀಯ ಜನರ ಸಮಸ್ಯೆಯನ್ನು ಪರಿಹರಿಸುವ ಕೆಲಸವನ್ನು ಮಾಡಬೇಕು ಎಂದರು ಪಕ್ಷದ ಕೆಲಸ ಕಾರ್ಯ ಗಳಿಗೆ ಏನೂ ನೆರವು ಬೇಕು ಅದನ್ನು ಒದಗಿಸಲು ನಾನು ಸಿದ್ದ ಎಂದು ಹೇಳಿದರು.
ಸಭೆಯಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರುಗಳಾದ ಯಾಕೂಬು ಮೂಲಾರ್, ಮಹಾಬಲ ರೈ ಒಳತಡ್ಕ, ಪುತ್ತೂರು ಬ್ಲಾಕ್ ಪ್ರಧಾನ ಕಾರ್ಯದರ್ಶಿ ಅಮಲಾ ರಾಮಚಂದ್ರ, ಪುತ್ತೂರು ಬ್ಲಾಕ್ ಸೇವಾದಳದ ಅಧ್ಯಕ್ಷ ವಿಶ್ವಜಿತ್ ಅಮ್ಮುಂಜೆ, ಪುತ್ತೂರು ಬ್ಲಾಕ್ ಯುವ ಕಾಂಗ್ರೆಸ್ ಉಪಾಧ್ಯಕ್ಷ ಬಾಲಕೃಷ್ಣ ಗೌಡ ಕೆಮ್ಮಾರ,, ಆರ್ಯಾಪು ಗ್ರಾಮ ಪಂಚಾಯತ್ ಸದಸ್ಯರುಗಳಾದ ನೇಮಾಕ್ಷ ಸುವರ್ಣ, ಶ್ರೀಮತಿ ರಕ್ಷಿತ ಗೋಪಾಲ ಗೌಡ. ವೇದಾವತಿ ಕಟ್ಟದ ಬೈಲು, ಪುತ್ತೂರು ಬ್ಲಾಕ್ ಕೋವಿಡ್ ಸೇವಕ್ ಸಿಮ್ರಾನ್ ನಜೀರ್,ಇಬ್ರಾಹಿಂ ಅಮ್ಮುಂಜೆ, ನಾಸಿರ್ ಇಡ ಬೆಟ್ಟು, ಕೇಶವ, ಫಾರೂಕ್ ಅಮ್ಮುಂಜೇ, ಗೋಪಾಲಗೌಡ, ಸುರೇಶ ಇಡಬೆಟ್ಟು, ಲಿಖಿತ್ ಇಡಬೆಟ್ಟು, ಶೀನಪ್ಪ ಗೌಡ ಇಡಬೆಟ್ಟು, ಬಾಬು ಗೌಡ ಇಡಬೆಟ್ಟು ಮೊದಲಾದವರು ಉಪಸ್ಥಿತರಿದ್ದರು.
ಹಿರಿಯ ಕಾಂಗ್ರೆಸ್ಸಿಗರಾದ ಇಬ್ರಾಹಿಂ ಅಮ್ಮುಂಜೆ ರವರನ್ನು ಕುರಿಯ 1ನೇ ವಾರ್ಡ್ ಸಮಿತಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.