ಭಾರತೀಯ ಕ್ರಿಕೆಟ್ ಟೀ ಕ್ಯಾಪ್ಟನ್ ವಿರಾಟ್ ಕೊಹ್ಲಿ ಇನ್ನುಮುಂದೆ ಟಿ20 ಕ್ರಿಕೆಟ್ ಟೀಂ ಕ್ಯಾಪ್ಟನ್ ಆಗಿ ಮುಂದುವರಿಯದಿರಲು ನಿರ್ಧರಿಸಿದ್ದಾರೆ. ದುಬೈನಲ್ಲಿ ನಡೆಯುವ ಟಿ20 ವರ್ಲ್ಡ್ಕಪ್ ನಂತರ ಕ್ಯಾಪ್ಟನ್ಸಿಯಲ್ಲಿ ಮುಂದುವರೆಯುವುದಿಲ್ಲ ಎಂದು ಹೇಳಿದ್ದಾರೆ.
ಟಿ20 ಕ್ಯಾಪ್ಟನ್ಶಿಪ್ನಿಂದ ಕೆಳಗಿಳಿಯುವುದಾಗಿ ಟ್ವಿಟರ್ನಲ್ಲಿ ವಿರಾಟ್ ಕೊಹ್ಲಿ ಮಾಹಿತಿ ನೀಡಿದ್ದಾರೆ.ಭಾರತವನ್ನು ಪ್ರತಿನಿಧಿಸುವುದಷ್ಟೇ ಅಲ್ಲದೆ ಭಾರತೀಯ ಕ್ರಿಕೆಟ್ ಟೀಂನ್ನು ಮುನ್ನಡೆಸುವ ಅವಕಾಶ ಸಿಕ್ಕಿದ್ದು ನನ್ನ ಪಾಲಿಗೆ ಅದೃಷ್ಠ. ಭಾರತೀಯ ಕ್ರಿಕೆಟ್ ಟೀಂ ನಾಯಕನಾಗಿ ನನ್ನ ಜರ್ನಿಗೆ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದಗಳು. ನಮ್ಮ ಟೀಂನ ಸದಸ್ಯರು, ಸಪೋರ್ಟ್ ಸ್ಟಾಫ್, ಸೆಲೆಕ್ಷನ್ ಕಮಿಟಿ, ಕೋಚ್ಗಳು ಮತ್ತು ಭಾರತವನ್ನು ಬೆಂಬಲಿಸಿದ ಎಲ್ಲರೂ ನನ್ನ ಸಾಧನೆಗೆ ಕಾರಣೀಭೂತರು.
ಈ ನಿರ್ಧಾರಕ್ಕೆ ಬರಲು ನನಗೆ ಬಹಳ ಸಮಯವೇ ಹಿಡಿಯಿತು. ನನ್ನ ಹತ್ತಿರದವರಾದ ರವಿ ಅಣ್ಣ, ರೋಹಿತ್ ಜೊತೆಗೆ ಸಮಾಲೋಚಿಸಿದ ನಂತರ ನಾನು ಟಿ 20 ವರ್ಲ್ಡ್ ಕಪ್ ನಂತರ ಟಿ 20 ಕ್ಯಾಪ್ಟನ್ ಆಗಿ ಮುಂದುವರೆಯದಿರಲು ನಿರ್ಧರಿಸಿದ್ದೇನೆ. ನಾನು ಬಿಸಿಸಿಐ ಸೆಕ್ರೆಟರಿ ಮಿ ಜೈ ಶಾ ಹಾಗೂ ಅಧ್ಯಕ್ಷ ಸೌರವ್ ಗಂಗೂಲಿ ಹಾಗೂ ಸೆಲೆಕ್ಟರ್ಸ್ ಜೊತೆಗೆ ಈ ವಿಚಾರವನ್ನು ಚರ್ಚಿಸಿದ್ದೇನೆ. ಭಾರತೀಯ ಕ್ರಿಕೆಟ್ ಹಾಗೂ ಭಾರತೀಯ ಟೀಂನಲ್ಲಿ ನನ್ನ ಸೇವೆ ಮುಂದುವರೆಯಲಿದೆ ಎಂದು ಕೊಹ್ಲಿ ಬರೆದುಕೊಂಡಿದ್ದಾರೆ. ಕೊಹ್ಲಿಯ ಈ ನಿರ್ಧಾರದಿಂದ ಕೊಹ್ಲಿ ಅಭಿಮಾನಿಗಳ ಹೃದಯ ಚೂರಾಗಿದೆ.