(ಜ. 27)ಪುತ್ತೂರು : ಪುತ್ತೂರಿನ ಕುರಿಯ ಗ್ರಾಮದ ಕುರಿಯ ಮಾಡಾವು ಎಳ್ನಾಡುಗುತ್ತು ತರವಾಡು ಮನೆಯ ಗೃಹಪ್ರವೇಶ ಮತ್ತು ಪ್ರತಿಷ್ಠಾ ಬ್ರಹ್ಮಕಲಶ ಹಾಗೂ ದೈವಗಳ ನೇಮೋತ್ಸವವು ಜ. 27ರಿಂದ ಜ. 30ರವರೆಗೆ ನಡೆಯಲಿದೆ.
ರಾಜರ ಕಾಲದಲ್ಲಿ ಹತ್ತೂರುಗಳಿಂದ ಕೂಡಿದ ತುಳುನಾಡಿನ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಸನ್ನಿಧಾನ ಮತ್ತು ಹುಟ್ಟುವ ಕೆರೆಯಿಂದಾಗಿ ಪುತ್ತೂರು ಸೀಮೆಯಾಗಿ ಪ್ರಸಿದ್ಧಿ ಪಡೆದು ಕೆದಂಬಾಡಿ ಅರಿಯಡ್ಕ ಒಳಮೊಗ್ರು, ಆರ್ಯಾಪು, ಕೆಮ್ಮಿಂಜೆ, ಕುರಿಯ, ಮುಂಡೂರು, ನರಿಮೊಗರು, ಕೆಯ್ಯೂರು, ಮತ್ತು ಪುತ್ತೂರು ಕಸಬಾಗಳನ್ನೊಳಗೊಂಡ ಊರುಗಳಲ್ಲಿ ದೈವಾರಾಧನೆಯಲ್ಲಿ ಕುರಿಯ ಏಳ್ನಾಡುಗುತ್ತು ಕೂಡಾ ತನ್ನದೇ ಆದ ಮಹತ್ವವನ್ನು ಹೊಂದಿಕೊಂಡಿದೆ. ಜಿಲ್ಲೆಯ ಪ್ರತಿಷ್ಠಿತ ಗುತ್ತಿನ ಬಂಟ ಮನೆತನದಲ್ಲಿ ದೈವಗಳ ಕಾರ್ಣಿಕ ತುಂಬಿ ಮೆರೆಯುತ್ತಿದೆ. ಅಂತಹ ಪುಣ್ಯ ತಾಣದಲ್ಲಿ 2 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಏಳ್ನಾಡುಗುತ್ತು ತರವಾಡು ಮನೆ ಮತ್ತು ದೈವದ ಚಾವಡಿಯ ಕೆಲಸ ಕಾರ್ಯಗಳು ನಡೆದಿದ್ದು, ಜ. 27ರಿಂದ ಬ್ರಹ್ಮಕಲಶೋತ್ಸವ ಕಾರ್ಯಕ್ರಮವು ಅದ್ದೂರಿಯಾಗಿ ಜರುಗಲಿದೆ.
ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಜ. 27ರಂದು ಉಗ್ರಾಣ ಮುಹೂರ್ತ, ಹಸಿರು ಹೊರೆಕಾಣಿಕೆ, ತಂತ್ರಿಗಳ ಆಗಮನ ಪೂರ್ಣಕುಂಭ ಸ್ವಾಗತ, ದೇವತಾ ಪ್ರಾರ್ಥನೆ, ಪ್ರಸಾದ ಪರಿಗ್ರಹ ಆಚಾರ್ಯವರಣೆ, ಸ್ವಸ್ತಿ ಪುಣ್ಯಾಹವಾಚನ, ಸ್ಥಳ ಶುದ್ಧಿ, ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಪೂಜಾ ಬಲಿ, ನೂತನ ಬಿಂಬ ಜಲಾಧಿವಾಸ, ಪ್ರಾಕಾರ ಬಲಿ ಕಾರ್ಯಕ್ರಮವಿದ್ದು, ಜ. 28ರಂದು ಮಹಾಗಣಪತಿ ಹೋಮ, ಬ್ರಹ್ಮಕಲಶ ಪೂಜೆ, ತರವಾಡು ಮನೆಯ ಗೃಹಪ್ರವೇಶ, ಧರ್ಮದೈವ ಧೂಮಾವತಿ, ವ್ಯಾಘ್ರಚಾಮುಂಡಿ, ಸಪರಿವಾರ ದೈವಗಳ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ತಂಬಿಲ ಸೇವೆ, ಮಂಗಳಾರತಿ, ಶ್ರೀ ಸತ್ಯನಾರಾಯಣ ಪೂಜೆ, ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಹಾಗೂ ತಂಡದಿಂದ ಯಕ್ಷಗಾನ ನಾಟ್ಯ ವೈಭವ, ದೈವಗಳ ಭಂಡಾರ ತೆಗೆಯುವುದು, ಗುರುಹಿರಿಯರ ಸಂತೃಪ್ತಿ, ವ್ಯಾಘ್ರಚಾಮುಂಡಿ ಹಾಗೂ ವರ್ಣರ ಪಂಜುರ್ಲಿ ದೈವದ ನೇಮವು ನಡೆಯಲಿದೆ. ಜ. 29ರಂದು ಶಗ್ರಿತ್ತಾಯ ಪಂಜುರ್ಲಿ ದೈವದ ನೇಮ, ಶ್ರೀ ಶಕ್ತಿ ಮಹಮ್ಮಾಯಿ ಪೂಜೆ, ಜೋಡು ಕಲ್ಲುರ್ಟಿ ನೇಮ ಜರುಗಲಿದ್ದು, ಜ. 30ರಂದು ಶಿರಾಡಿ, ಮಲರಾಯ, ಧೂಮಾವತಿ, ಗುಳಿಗ ದೈವಗಳ ನೇಮೋತ್ಸವದ ಮೂಲಕ ಕಾರ್ಯಕ್ರಮವು ಕೊನೆಗಾಣಲಿದೆ.
ಕಾರ್ಯಕ್ರಮದಲ್ಲಿ ಶ್ರೀ ಗುರುದೇವದತ್ತ ಸಂಸ್ಥಾನಮ್ ನ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿಗಳ ದಿವ್ಯ ಉಪಸ್ಥಿತಿಯಿದ್ದು, ಆಶೀರ್ವಚನ ನೀಡಲಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ಉದ್ಘಾಟಕರಾಗಿ, ಶಾಸಕ ಸಂಜೀವ ಮಠಂದೂರು, ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ತಾಲೂಕು ಪಂಚಾಯತ್ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಶ್ರೀ ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸೀತಾರಾಮ ರೈ ಸವಣೂರು, ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ರಾಧಾಕೃಷ್ಣ ರೈ ಬೂಡಿಯಾರು, ತಾ. ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಸಾಂದೀಪನಿ ವಿದ್ಯಾಸಂಸ್ಥೆ ಸಂಚಾಲಕ ಭಾಸ್ಕರ್ ಆಚಾರ್ಯ ಹಿಂದಾರು, ಪ್ರವೀಣ್ ಶೆಟ್ಟಿ, ರಮೇಶ್ ರೈ ಡಿಂಬ್ರಿ, ಪುರುಷೋತ್ತಮ ರೈ ಬೂಡಿಯಾರು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಕೆ. ರಾಧಾಕೃಷ್ಣ ರೈ ಕುರಿಯ ಏಳ್ನಾಡುಗುತ್ತು, ಕಾರ್ಯದರ್ಶಿ ವಿನೋದ್ ಕುಮಾರ್ ರೈ, ಬ್ರಹ್ಮಕಲಶೋತ್ಸವ ಸಮಿತಿ ಕೋಶಾಧಿಕಾರಿ ಶಿವರಾಮ ರೈ ಜಾಲ್ಸೂರು, ಎನ್. ಮಂಜುನಾಥ್ ರೈ ನಂಜೆ, ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಎಸ್. ಬಿ. ಜಯರಾಮ ರೈ ಬಳಜ್ಜ, ಕುರಿಯ ರಾಜೇಂದ್ರ ಪ್ರಸಾದ್ ಶೆಟ್ಟಿ, ಚಂದ್ರಹಾಸ್ ರೈ, ಎಸ್.ಮಾಧವ ರೈ ಉಪಸ್ಥಿತರಿರಲಿದ್ದಾರೆ.