ಬೆಂಗಳೂರು: ಅನ್ಯಕೋಮಿನ ಮಹಿಳೆಗೆ ಡ್ರಾಪ್ ಕೊಟ್ಟಿದ್ದಕ್ಕೆ ಹಿಂದು ಯುವಕನ ಮೇಲೆ ಹಲ್ಲೆ ಮಾಡಿರುವ ಘಟನೆ ನಗರದ ಡೈರಿ ಸರ್ಕಲ್ನಲ್ಲಿ ನಡೆದ ಬಗ್ಗೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಹೇಶ್ ಎಂಬಾತ ಹಲ್ಲೆಗೊಳಗಾದ ವ್ಯಕ್ತಿ ಎಂದು ಹೇಳಲಾಗುತ್ತಿದ್ದು ಈತನ ಮೇಲೆ ಅನ್ಯಕೋಮಿನ ಕೆಲ ಯುವಕರು ಹಲ್ಲೆ ಮಾಡಿದ್ದಾರೆ ಎಂದು ಆರೋಪ ವ್ಯಕ್ತವಾಗಿದೆ.
ಶುಕ್ರವಾರ ರಾತ್ರಿ ಘಟನೆ ನಡೆದಿದ್ದೂ , ಶನಿವಾರ ಘಟನೆಯ ವಿಡಿಯೋ ವೈರಲ್ ಆಗಿದೆ. ಹಲ್ಲೆಗೆ ಒಳಗಾಗಿದ್ದಾರೆ ಎಂದು ಹೇಳಲಾಗುತ್ತಿರುವಮಹೇಶ್ ಬ್ಯಾಂಕ್ ಉದ್ಯೋಗಿ. ಆವರ ಬೈಕ್ ನಲ್ಲಿ ಡ್ರಾಪ್ ಪಡೆದ ಮುಸ್ಲಿಂ ಮಹಿಳೆ ಮಹೇಶ್ ಅವರ ಸಹದ್ಯೋಗಿ.ಆ ಮಹಿಳೆಯನ್ನು ಮನೆಗೆ ಡ್ರಾಪ್ ಮಾಡೋ ವೇಳೆ ಕಿಡಿಗೇಡಿಗಳ ತಂಡ ಹಿಂಬಾಲಿಸಿ ಬಂದು ಹಲ್ಲೆ ಮಾಡಿದೆ ಎನ್ನಲಾಗಿದೆ.
ಇನ್ನೊಂದು ಸಾರಿ ಬುರ್ಕಾ ಹಾಕೊಂಡಿರುವವರನ್ನು ಕೂರಿಸಿಕೊಂಡು ಹೋದ್ರೆ ಅಷ್ಟೇ ಎಂದು ಅವಾಜ್ ಕೂಡ ಹಾಕಿರುವುದು ವಿಡಿಯೋದಲ್ಲಿ ಕಾಣಬಹುದಾಗಿದೆ.ಇದೇ ವೇಳೆ ಮಹಿಳೆಗೂ ಅವಾಜ್ ಹಾಕಿರುವ ಪುಂಡರು ಏನಮ್ಮ ನಿನ್ ಹೆಸರು? ನಿನಗೆ ನಾಚಿಕೆಯಾಗಲ್ವಾ… ಈ ಜಗತ್ತಲ್ಲಿ ಏನಾಗ್ತಿದೆ ಅಂತಾ ಗೊತ್ತಿಲ್ವಾ? ಇಂಥವರ ಜತೆ ಹೋಗಬಾರದು ಅಂತಾ ಗೊತ್ತಾಗಲ್ವಾ ನಿನಗೆ ಎಂದು ಏರು ಧ್ವನಿಯಲ್ಲಿ ಹೆದರಿಸಿದ್ದಾರೆ.ಇಬ್ಬರ ಮನೆಗೂ ಒಂದೇ ದಾರಿಯಿದ್ದೂ ಮನೆಗೆ ಹೊರಟಿದ್ದೆ. ಹಾಗಾಗಿ ಡ್ರಾಪ್ ಕೇಳಿದೆ ನನಗೆ ಮದುವೆ ಆಗಿದೆ ಎಂದು ಮಹಿಳೆ ಪರಿ ಪರಿಯಾಗಿ ಪುಂಡರ ಬಳಿ ಕೇಳಿಕೊಡಿದ್ದಾರೆ. ಅದರೂ ಬಿಡದ ಪುಂಡರು ಬೈಕ್ನಿಂದ ಕೆಳಗೆ ಇಳಿಯೋ ಅಂತ ಸವಾರನಿಗೆ ಧಮ್ಕಿ ಹಾಕಿ ಥಳಿಸಿದ್ದಾರೆ. ಬುರ್ಕಾ ಹಾಕೊಂಡು ಬೇರೊಬ್ಬನ ಜತೆ ಹೋಗೊದು ತಪ್ಪು ಎಂದು ವಾದಿಸಿದ್ದಾರೆ. ಬಳಿಕ ಯುವತಿ ಕುಟುಂಬಸ್ಥರಿಗೆ ಕರೆ ಮಾಡಿಯೂ ಪುಂಡರು ಆವಾಜ್ ಹಾಕಿದ್ದಾರೆ ಎಂದು ವರದಿಯಾಗಿದೆ.
ಇತ್ತ ಸಾಮಾಜಿಕ ಜಾಲತಾಣದಲ್ಲಿ ಹಲ್ಲೆ ಮಾಡಿದವರ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ. ಹಾಗೂ ಪರ ವಿರೋಧದ ಚರ್ಚೆ ನಡೆಯುತ್ತಿದೆ.