ಪುತ್ತೂರು: ವಿಶ್ವಹಿಂದೂ ಪರಿಷದ್ ಮತ್ತು ಭಜರಂಗದಳ ಶ್ರೀ ದುರ್ಗಾ ವೆಂಕಟ್ರಮಣ ಘಟಕ ಸಾಜ ಹಾಗೂ ಬಿಜೆಪಿ ಬೂತ್ ಸಮಿತಿ ಇದರ ಸಹಯೋಗದೊಂದಿಗೆ ಸೇವಾ ಸಪ್ತಾಹದ ಅಂಗವಾಗಿ ಸಾಜ ಪರಿಸರದಿಂದ ಕೂಟೇಲು ಪರಿಸರದವರೆಗೆ ಸ್ವಚ್ಛತಾ ಕಾರ್ಯ ನಡೆಸಿದರು.
ಈ ಸಂದರ್ಭದಲ್ಲಿ ಬಲ್ನಾಡು ಗ್ರಾಮದ ಬಿಜೆಪಿ ಶಕ್ತಿಕೇಂದ್ರದ ಸಂಚಾಲಕರಾದ ಅಕ್ಷಯ್ ಶೆಟ್ಟಿ ಸಲ್ಪಾಜೆ , ಬಲ್ನಾಡು ಗ್ರಾಮ ಪಂಚಾಯತ್ ಸದಸ್ಯರಾದ ರವಿಚಂದ್ರ ಸಾಜ ಹಾಗೂ ಸಂಜೀವ ನಾಯ್ಕ ಸಾಜ, ಸುದೇಶ್ ಶೆಟ್ಟಿ ಸಾಜ, ನಾಗೇಶ್ ನಾಯ್ಕ ಸಾಜ, ಮೋನಪ್ಪ ನಾಯ್ಕ ಮುರುಂಗಿ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.