ಪುತ್ತೂರು: ಸುಮಾರು 13 ವರ್ಷಗಳಿಂದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪುತ್ತೂರು ನಗರ ಠಾಣಾ ಪೊಲೀಸರು ದಾವಣಗೆರೆಯ ಚೆನ್ನಗಿರಿ ತಾಲೂಕಿನ ದಾಗಿನಕಟ್ಟೆಯಲ್ಲಿ ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಬಂಧಿತ ಆರೋಪಿಯನ್ನು ಲಕ್ಷ್ಮಣ ಎಂದು ಗುರುತಿಸಲಾಗಿದೆ.

ಕಾರ್ಯಚರಣೆಯಲ್ಲಿ ಪುತ್ತೂರು ನಗರ ಠಾಣಾ ಹೆಚ್. ಸಿ ಪರಮೇಶ್ವರ, ಹೆಚ್. ಸಿ ಬಸವರಾಜ್ ಭಾಗವಹಿಸಿದ್ದರು.
ಆರೋಪಿ ವಿರುದ್ಧ ಠಾಣೆಯಲ್ಲಿ ಅ.ಕ್ರ: 92/2002 ಕಲಂ: 143,147,148,341,324, 326,506 ಜೊತೆಗೆ 149 ಐಪಿಸಿ ಯಂತೆ(LPc17/2009) ಪ್ರಕರಣ ದಾಖಲಾಗಿತ್ತು.