ಪುತ್ತೂರು: ಕೆಮ್ಮಾಯಿ ನಿವಾಸಿ ಚಂದ್ರ ಫ್ಯಾನ್ಸಿ ಮಾಲಕ ಎ. ಪುರುಷೋತ್ತಮ ಆಚಾರ್ಯ (84) ಅಲ್ಪ ಕಾಲದ ಅಸೌಖ್ಯದಿಂದಾಗಿ ಸೆ.20 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಪುರುಷೋತ್ತಮ ಆಚಾರ್ಯ ರವರು ಪುತ್ತೂರು ವಿಶ್ವಕರ್ಮ ಸಮಾಜ ಸೇವಾ ಸಂಘದ ಸ್ಥಾಪಕ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು ಹಾಗೆಯೇ ಕೊಡುಗೈ ದಾನಿಗಳಾಗಿದ್ದರು.

ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.