ರಾಮಕುಂಜ: ಇಲ್ಲಿನ ಸಂಪ್ಯಾಡಿ ನಿವಾಸಿ ರಾಧಾಕೃಷ್ಣ ಗೌಡ ಅವರ ಪುತ್ರ ದಾಮೋದರ (31ವ.) ಅವರು ಮೇ 16ರಂದು ಬೆಳಗ್ಗೆ ಹಠಾತ್ ಅನಾರೋಗ್ಯಕ್ಕೆ ಒಳಗಾಗಿ ನಿಧನರಾಗಿದ್ದಾರೆ.
ಕೃಷಿಕರಾಗಿದ್ದ ದಾಮೋದರ ಅವರು ಬೆಳಗ್ಗೆ ಮನೆಯ ಹೊರಗಡೆ ಕುಳಿತಿದ್ದ ವೇಳೆ ಹಠಾತ್ ಕುಸಿದು ಬಿದ್ದ ಪರಿಣಾಮ ತಲೆಗೆ ಗಾಯವಾಗಿತ್ತು.
ಮನೆಯವರು ತಕ್ಷಣ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದರಾದರೂ ಆ ವೇಳೆಗೆ ಅವರು ಮೃತಪಟ್ಟಿದ್ದರು ಎಂದು ವರದಿಯಾಗಿದೆ. ಮೃತ ಯುವಕ ಅವಿವಾಹಿತರಾಗಿದ್ದು ತಂದೆ ರಾಧಾಕೃಷ್ಣ ಗೌಡ, ತಾಯಿ ಸುಶೀಲ ಅವರನ್ನು ಅಗಲಿದ್ದಾರೆ. ಮೃತರ ಮನೆಗೆ ಹಲವು ಗಣ್ಯರು ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.


























